ವ್ಯಾಯಾಮ ಎಂದರೆ ಹೆಚ್ಚಿನವರು ಮೈ ಬೆವರಿಳಿಯುವಂತೆ ಓಡಬೇಕು ಎಂದುಕೊಳ್ಳುತ್ತಾರೆ. ಆದರೆ ಇದು ಸರಿಯಾದ ಕ್ರಮವೇ ಎಂಬ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಹೀಗೆ ಹೇಳಿದ್ದರು.
ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡುವುದು ಉತ್ತಮ. ಆದರೆ ಅನೇಕರಿಗೆ ವ್ಯಾಯಾಮದ ಬಗ್ಗೆ ತಪ್ಪು ಕಲ್ಪನೆಗಳಿವೆ. ವ್ಯಾಯಾಮ ಮಾಡುವುದು ಎಂದರೆ ಮೈ ಬೆವರಿಳಿಯುವಂತೆ ಕಸರತ್ತು ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.
ಆದರೆ ಮೈ ಬೆವರಿಳಿಯುವಷ್ಟು ಕಸರತ್ತು ನಡೆಸಬೇಕೆಂದೇನಿಲ್ಲ ಎನ್ನುವುದು ಡಾ ಬಿಎಂ ಹೆಗ್ಡೆ ಅಭಿಪ್ರಾಯ. ಪ್ರತಿನಿತ್ಯ ಒಂದು ಗಂಟೆ ವಾಕಿಂಗ್ ಮಾಡಿದರೆ ಸಾಕು. ಕನಿಷ್ಠ 20 ನಿಮಿಷವಾದರೂ ಬಿಡುವು ತೆಗೆದುಕೊಳ್ಳದೇ ನಡೆಯಬೇಕು. ಐದು ನಿಮಿಷ ನಡೆದು ಐದು ನಿಮಿಷ ವಿಶ್ರಾಂತಿ ಪಡೆದರೆ ಪ್ರಯೋಜನವಾಗದು.
ಕೆಲವರು ಓಡುತ್ತಾರೆ. ಆದರೆ ಓಡುವ ಅಗತ್ಯವಿಲ್ಲ. ನಾವು ಮನುಷ್ಯರು. ನಮ್ಮನ್ನು ಸೃಷ್ಟಿಸಿರುವುದೇ ಹಾಗೆ. ನಾವು ಆಹಾರಕ್ಕಾಗಿ ಓಡಬೇಕಾಗಿಲ್ಲ. ಅದು ಮಾಂಸ ಭಕ್ಷ ಪ್ರಾಣಿಗಳ ಕೆಲಸ. ಅವರ ಆಹಾರವೂ ಓಡುವ ಪ್ರಾಣಿಯಾಗಿರುವುದರಿಂದ ಅವುಗಳು ಓಡುತ್ತವೆ. ಆದರೆ ಮನುಷ್ಯನಿಗೆ ಹಾಗಲ್ಲ. ಹೀಗಾಗಿ ಓಡುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.