Select Your Language

Notifications

webdunia
webdunia
webdunia
webdunia

ಅತಿಯಾಗಿ ಸೀನು ಬರುತ್ತಿದ್ದರೆ ಏನು ಮಾಡಬೇಕು

Sneeze
ಕೆಲವರಿಗೆ ಅತಿಯಾಗಿ ಸೀನು ಬರುತ್ತಿರುತ್ತದೆ. ಇದು ಒಂಥರಾ ಕಿರಿ ಕಿರಿ ಅನುಭವ ಕೊಡುತ್ತದೆ. ಅತಿಯಾಗಿ ಸೀನು ಬರುತ್ತಿದ್ದರೆ ಕಾರಣವೇನು ಮತ್ತು ಅದಕ್ಕೆ ಪರಿಹಾರವೇನು ಇಲ್ಲಿದೆ ವಿವರ.

ಸೀನುವಿಕೆಗೆ ಕಾರಣಗಳೇನು?
-ಧೂಳು, ಹೂವಿನ ಕುಸುಮ ಇತ್ಯಾದಿಗಳು ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಇದರಿಂದ ಪದೇ ಪದೇ ಸೀನುವ ಪರಿಸ್ಥಿತಿಯಾಗಬಹುದು.
-ಕೆಲವೊಂದು ವೈರಸ್ ಗಳು ಅತಿಯಾದ ಸೀನುವಿಕೆಗೆ ಕಾರಣವಾಗಬಹುದು. ಮಾಲಿನ್ಯಯುತ ಗಾಳಿಯಿದ್ದರೆ, ಹೊಗೆಯ ವಾತಾವರಣವಿದ್ದರೆ ಸೀನು ಬರಬಹುದು.
-ವಾತಾವರಣದಲ್ಲಿ ಬದಲಾವಣೆ, ಅತಿಯಾದ ಖಾರದ ಪದಾರ್ಥ ಸೇವನೆಯಿಂದಲೂ ಸೀನು ಬರುವ ಸಾಧ್ಯತೆಯಿರುತ್ತದೆ.

ಪರಿಹಾರವೇನು?
-ಸ್ವಲ್ಪ ಶುಂಠಿ ಚೂರಿಗೆ ಉಪ್ಪು ಸೇರಿಸಿಕೊಂಡು ಜಗಿಯುತ್ತಿರಬೇಕು. ಇಲ್ಲವೇ ಶುಂಠಿ ಹಾಕಿ ಕುದಿಸಿದ ನೀರನ್ನು ಪದೇ ಪದೇ ಸೇವನೆ ಮಾಡುತ್ತಿರಬೇಕು.
-ಒಂದು ಲೋಟ ಬಿಸಿ ನೀರು ಅಥವಾ ಹಾಲಿಗೆ ಸ್ವಲ್ಪ ಅರಿಶಿನ ಹಾಕಿಕೊಂಡು ಸೇವನೆ ಮಾಡಬೇಕು.
-ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ಬಿಸಿ ನೀರಿಗೆ ಜೇನು ತುಪ್ಪ ಹಾಕಿಕೊಂಡು ಕುಡಿಯುವುದನ್ನು ಅಭ್ಯಾಸ ಮಾಡಿ.
-ತುಳಸಿ ಎಲೆಗಳನ್ನು ಜಜ್ಜಿ ಅದರ ಘಮ ಆಘ್ರಾಣಿಸುತ್ತಿದ್ದರೆ ಸೀನು ಕಡಿಮೆಯಾಗುತ್ತದೆ.

ನೆನಪಿರಲಿ: ಇದೆಲ್ಲವೂ ಮನೆ ಮದ್ದುಗಳಷ್ಟೇ. ಪರಿಸ್ಥಿತಿ ಕೈ ಮೀರಿದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹರ್ಬಲ್ ಟೀಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ, ಆಮೇಲೆ ಮ್ಯಾಜಿಕ್ ನೋಡಿ