ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಧದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದೇ ಇರುತ್ತದೆ. ಕೆಲವರು ಈ ಸಮಸ್ಯೆಯನ್ನು ಸರಿದೂಗಿಸಲು ಹಲವು ವಿಧದ ಮನೆ ಮದ್ದುನ್ನು ಮಾಡುವುದು ಉಂಟು. ಆದರೆ ನಮ್ಮ ಆಹಾರದಲ್ಲಿ ಏನಾದರೂ ಹೆಚ್ಚು ಕಮ್ಮಿಯಾದಲ್ಲಿ ಅದು ನೇರವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಉಲ್ಭವಿಸುವುದುಂಟು.
ಈ ವಿಚಾರವಾಗು ಆಯುಷ್ಯ ಫೌಂಡೇಶನ್‌ನ ಅನುಷ್ಕಾ ಅವರು ಈ ಬಗ್ಗೆ ಪರಿಹಾರವನ್ನು ನೀಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇವರ ಪ್ರಕಾರ ಮೆಡಿಸಿನ್‌ಗಳನ್ನು ಸೇವನೆ ಮಾಡುವುದರಿಂದ ತಾತ್ಕಾಲಿಕ ರಿಲೀಪ್‌ನ್ನು ಪಡೆಯುತ್ತೇವೆ ಹೊರತು ಅದಕ್ಕೆ ಪೂರ್ಣ ಪ್ರಮಾಣ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಹೀಗಾಗಿ ಗ್ಯಾಸ್ಟ್ರಿಕ್ ಇರುವವರು ಮೊದಲು ಯಾವುದರಿಂದ ಗ್ಯಾಸ್ಟ್ರಿಕ್ ಬರುತ್ತಿದೆ ಎಂದು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಬೇಕು. ಬುಡದಿಂದಲೇ ನಾವು ಸರಿಮಾಡಿಕೊಂಡು ಬಂದರಷ್ಟೇ ಅದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.
ಮೊದಲು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ತದನಂತರ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ಇನ್ನೂ ಅದರಲ್ಲಿ ಅಕ್ಯುಪ್ರೆಷರ್ ಟ್ರೀಟ್ಮೆಂಟ್ ಒಂದು. ಇದನ್ನು ಬೆಳಿಗ್ಗೆ ಎದ್ದೆ ತಕ್ಷಣ, ಇಲ್ಲದಿದ್ರೆ ತಿಂಡಿ ತಿಂದು ಎರಡು ಗಂಟೆ ಬಳಿಕ ಮಾಡಿದರೆ ಉತ್ತಮ.
ಕೈಯ ಮಧ್ಯದ ಬೆರಳಿನ ಜಾಯಿಂಟ್ ಬಳಿ ಪ್ರೆಸ್ ಮಾಡಿ ಸ್ಟಿಮ್ಯುಲೇಶನ್ ಕೊಡಿ. ಇದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳನ್ನು ದೂರಮಾಡಬಹುದು. ಗರ್ಭಿಣಿಯರು ಇದನ್ನು ಮಾಡುವುದು ಉತ್ತಮವಲ್ಲ. ಈ ರೀತಿ ಮಾಡುವಾಗ ಗ್ಯಾಸ್ಟ್ರಿಕ್ ಸಮಸ್ಯೆ ಹೋಗುತ್ತಿದೆ ಎಂದು ಮನಸ್ಸಿನಲ್ಲಿ ಹೇಳಿಕೊಂಡು ಇದನ್ನು ಪ್ರಯೋಗಿಸಿ. ಕ್ರಮೇಣ ನಿಮಿಗೆ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು.