Select Your Language

Notifications

webdunia
webdunia
webdunia
webdunia

ಹೃದಯಾಘಾತದ ನೋವು, ಗ್ಯಾಸ್ಟ್ರಿಕ್ ನೋವಿಗಿರುವುದು ಇದೊಂದೇ ಸಣ್ಣ ಅಂತರ: ಡಾ ಸಿಎನ್ ಮಂಜುನಾಥ್ ಟಿಪ್ಸ್

Dr CN Manjunath

Krishnaveni K

ಬೆಂಗಳೂರು , ಮಂಗಳವಾರ, 14 ಅಕ್ಟೋಬರ್ 2025 (12:18 IST)
ಹೃದಯಾಘಾತವಾಗುವಾಗ ಎಷ್ಟೋ ಜನಕ್ಕೆ ಎದೆಯಲ್ಲಿ ನೋವೇ ಆಗಲ್ಲ. ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬರೋದೂ ಇದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಸಂವಾದವೊಂದರಲ್ಲಿ ಹೇಳಿದ್ದರು.

ಹೃದಯಾಘಾತವಾಗುವಾಗ ಎದೆಯಲ್ಲಿ ನೋವಾಗುತ್ತದೆ ಎಂದು ಅನೇಕರು ಅಂದುಕೊಂಡಿದ್ದಾರೆ. ಕೆಲವರಿಗೆ ಇದು ನಿಜವಿರಬಹುದು. ಆದರೆ ಎದೆನೋವಾಗುವುದೊಂದೇ ಹೃದಯಾಘಾತದ ಲಕ್ಷಣವಲ್ಲ ಎನ್ನುವುದು ಡಾ ಸಿಎನ್ ಮಂಜುನಾಥ್ ಅವರ ಅಭಿಪ್ರಾಯ.

ಎಷ್ಟೋ ಜನಕ್ಕೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಬಂದು ವಾಂತಿಯಾಗಿ ಗ್ಯಾಸ್ಟ್ರಿಕ್ ಇರಬಹುದು ಎಂದು ತಪ್ಪು ತಿಳಿದುಕೊಂಡು ಅದಕ್ಕೆ ಮಾತ್ರೆ ನುಂಗಿ ಪ್ರಾಣ ಕಳೆದುಕೊಂಡವರಿದ್ದಾರೆ. ಇನ್ನು ಕೆಲವರಿಗೆ ದವಡೆಯಲ್ಲಿ ನೋವು ಬರಬಹುದು. ಆದರೆ ಹಲ್ಲು ನೋವು ಎಂದು ತಪ್ಪಾಗಿ ತಿಳಿದುಕೊಂಡು ಪ್ರಾಣಕ್ಕೆ ತೊಂದರೆ ತಂದುಕೊಂಡವರೂ ಇದ್ದಾರೆ.

ಇನ್ನು ಕೆಲವರಿಗೆ ಗಂಟಲು ನೋವು ಬರುವುದೂ ಇದೆ. ಕೆಲವರಿಗೆ ಊಟ ಮಾಡಿದ ಬಳಿಕ ನಡೆಯುವಾಗ, ಹತ್ತುವಾಗ, ಇಳಿಯುವಾಗ ಎದೆ ಉರಿ ಬಂದರೆ, ಎಡಕೈ, ಭುಜದ ಭಾಗ ನೋವು ಬಂದರೆ ಹೃದಯಾಘಾತದ ಲಕ್ಷಣವಿರಬಹುದು. ಆದರೆ ಕೆಲವರು ನನಗೆ ಕೂತಿದ್ದಾಗ ನೋವು ಬರುತ್ತದೆ. ಆದರೆ ಎದ್ದು ಓಡಾಡುವಾಗ ಆರಾಮವಾಗಿರುತ್ತದೆ ಎನ್ನುತ್ತಾರೆ. ಹೀಗಿದ್ದಾಗ ಅದು ಹೃದಯದ ಸಮಸ್ಯೆಯಲ್ಲ. ಹೀಗಾಗಿ ಇದರ ವ್ಯತ್ಯಾಸವನ್ನು ನೀವು ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಪ್ರಾಣ ಕಾಪಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಬಳವಿಲ್ಲದೇ ಗ್ರಂಥಪಾಲಕಿ ಆತ್ಮಹತ್ಯೆ: ಪ್ರಿಯಾಂಕ್ ಖರ್ಗೆಗೆ ಇದೆಲ್ಲಾ ಕಾಣಲ್ಲ ಎಂದ ವಿಜಯೇಂದ್ರ