ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದವೊಂದರಲ್ಲಿ ಸಕ್ಕರೆ ಖಾಯಿಲೆ ದೂರ ಮಾಡಲು ಯಾವ ಆಹಾರ ಬೆಸ್ಟ್ ಎಂದು ಹೇಳಿದ್ದಾರೆ. ಅವರು ಏನು ಹೇಳಿದ್ದರು ನೋಡಿ.
ಆಧುನಿಕ ಜಗತ್ತಿನಲ್ಲಿ ನಮ್ಮ ಆಹಾರ ಶೈಲಿಯೇ ಅನೇಕ ರೋಗಗಳಿಗೆ ಕಾರಣವಾಗಿದೆ. ಅಧಿಕ ಕೊಬ್ಬಿನಂಶವಿರುವ ಆಹಾರ, ಫಾಸ್ಟ್ ಫುಡ್ ಇತ್ಯಾದಿಗಳಿಗೆ ನಾವು ಮಾರು ಹೋಗಿದ್ದೇವೆ. ಇಂತಹ ಆಹಾರ ಸೇವನೆ ನಮ್ಮ ದೇಹಕ್ಕೆ ಮಾರಕವಾಗುತ್ತದೆ.
ಅದರ ಬದಲು ನಮ್ಮ ಆಹಾರದಲ್ಲಿ ಸಿರಿ ಧಾನ್ಯಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಸಿರಿ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ದೇಹ ಹೆಚ್ಚು ಆರೋಗ್ಯವಾಗಿರುತ್ತದೆ. ವಿಶೇಷವಾಗಿ ಸಿರಿ ಧಾನ್ಯಗಳ ಸೇವನೆಯಿಂದ ಸಕ್ಕರೆ ಖಾಯಿಲೆ ದೂರ ಮಾಡಬಹುದು. ಸಿರಿ ಧಾನ್ಯಗಳಲ್ಲಿ ಬೇಡದ ಕೊಬ್ಬಿನಂಶವೂ ಇರಲ್ಲ. ಹೀಗಾಗಿ ರಕ್ತದೊತ್ತಡ ಮತ್ತು ಬೊಜ್ಜು ಕಡಿಮೆ ಮಾಡಬಹುದು. ತೂಕ ಇಳಿಕೆ ಮಾಡುವವರಿಗೆ ಇದು ಬೆಸ್ಟ್ ಆಹಾರ.
ಇನ್ನು ಸಿರಿ ಧಾನ್ಯಗಳಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ಇದರಿಂದ ರಕ್ತ ಹೀನತೆ ಅಪಾಯವೂ ಇರಲ್ಲ. ಹೀಗಾಗಿ ಸಿರಿ ಧಾನ್ಯಗಳನ್ನು ನಮ್ಮ ಆಹಾರದಲ್ಲಿ ಸೇರಿಸಿ ಔಷಧಿಗಳಿಂದ ದೂರವಿರೋಣ ಎಂದು ಒಮ್ಮೆ ಅವರು ಕರೆ ನೀಡಿದ್ದರು.