Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

Rashes
Photo Credit: AI Image
ಚಳಿಗಾಲ ಬಂತೆಂದರೆ ಚರ್ಮಗಳು ಸುಕ್ಕುಗಟ್ಟುತ್ತವೆ. ಡ್ರೈ ಸ್ಕಿನ್ ನಿಂದಾಗಿ ಮೈಯೆಲ್ಲಾ ತುರಿಕೆ, ಬಿರುಕು ಬಿಟ್ಟಂತೆ ಅನಿಸಬಹುದು. ಇದಕ್ಕೆ ಏನು ಪರಿಹಾರ ಇಲ್ಲಿದೆ ನೋಡಿ.

ಸ್ನಾನದ ನಿಯಮ: ಚಳಿಗಾದಲ್ಲಿ ಅತಿಯಾದ ಬಿಸಿ ನೀರಿನಲ್ಲಿ ತುಂಬಾ ಹೊತ್ತು ಸ್ನಾನ ಮಾಡಬೇಡಿ. ಹದ ಬಿಸಿ ನೀರಿನಲ್ಲಿ ಬೇಗನೇ ಸ್ನಾನ ಮುಗಿಸಿ. ಇದರಿಂದ ಚರ್ಮ ಸುಕ್ಕುಗಟ್ಟಿ ತುರಿಕೆಯಾಗದು.

ಕೊಬ್ಬರಿ ಎಣ್ಣೆ/ಮಾಯಿಶ್ಚರೈಸರ್: ಸ್ನಾನಕ್ಕೆ ಮೊದಲು ಕೈ ಕಾಲುಗಳಿಗೆ ಹದವಾಗಿ ಕೊಬ್ಬರಿ ಎಣ್ಣೆ ಹಚ್ಚಿ. ಸ್ನಾನದ ನಂತರ ಮಾಯಿಶ್ಚರೈಸರ್ ಹಚ್ಚಿ.

ಸಾಧ್ಯವಾದರೆ ಸ್ನಾನಕ್ಕೆ ಮೊದಲು ಕೆಲವು ಹೊತ್ತು ಚರ್ಮಕ್ಕೆ ಹಬೆ ನೀಡಿ. ಇದರಿಂದ ಸುಕ್ಕು ಗಟ್ಟಿದ ಚರ್ಮ ಸಡಿಲವಾಗುತ್ತದೆ.

ವಿಶೇಷವಾಗಿ ಚಳಿಗಾಲದಲ್ಲಿ ಬಾಯಾರಿಕೆಯಾಗದಿದ್ದರೂ ಹೆಚ್ಚು ನೀರು ಅಥವಾ ನೀರಿನಂಶ ಸೇವಿಸಿ. ಇದರಿಂದ ಚರ್ಮಕ್ಕೆ ಸಾಕಷ್ಟು ನೀರಿನಂಶ ಸಿಗುವುದು. ಆದಷ್ಟು ಹೊರಗೆ ಓಡಾಡುವಾಗ ಸನ್ ಸ್ಕ್ರೀನ್ ಅಥವಾ ಮಾಸ್ಕ್, ಟೋಪಿ ಬಳಸಿ ಓಡಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು