Daily Horoscope

Select Your Language

Notifications

webdunia
webdunia
webdunia
webdunia

ಹೃದಯದ ಕಾಳಜಿಗೆ ಈ ಹಣ್ಣುಗಳು ಉತ್ತಮ

 Heart Health
Photo Credit X
ನಾವು ಸರಿಯಾದ ಆಹಾರ ಕ್ರಮವನ್ನು ದಿನನಿತ್ಯದಲ್ಲಿ ಅನುಸರಿಸಿದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಪದ್ಧತಿ ಬಹಳ ಮುಖ್ಯ. ಇನ್ನೂ ಹೃದಯ ಕಾಳಜಿ ಹಿನ್ನೆಲೆ, ಉತ್ತಮವಾದ ಪ್ರಮುಖ ಹಣ್ಣುಗಳ ಮಾಹಿತಿ ಇಲ್ಲಿದೆ.

*ಸೇಬು: ಪೆಕ್ಟಿನ್ ಎಂಬ ಕರಗುವ ನಾರಿನಂಶವಿರುವುದರಿಂದ  ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೊಂದು ಸೇಬು ತಿಂದರೆ ಹೃದಯದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

*ಬೆರ್ರಿ ಹಣ್ಣುಗಳು : ಸ್ಟ್ರಾಬೆರಿ, ಬ್ಲೂಬೆರಿ ಮತ್ತು ರಾಸ್ಬೆರಿಗಳಲ್ಲಿ ಆಂಥೋಸಯಾನಿನ್‌ಗಳಂತಹ ಆಂಟಿ-ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ರಕ್ತನಾಳಗಳ ಉರಿಯೂತವನ್ನು ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತವೆ.

*ಬಾಳೆಹಣ್ಣು: ಪೊಟ್ಯಾಸಿಯಮ್ ಬಾಳೆಹಣ್ಣಿನಲ್ಲಿ ಹೇರಳವಾಗಿರುವುದರಿಂದ ಇದು ದೇಹದಲ್ಲಿನ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಿ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

*ಕಿತ್ತಳೆ ಮತ್ತು ಲಿಂಬೆ: 

ಇವುಗಳಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳಿವೆ. ಇವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತವೆ ಮತ್ತು ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.

*ಪಪ್ಪಾಯಿ:  ಪಪ್ಪಾಯಿಯಲ್ಲಿ ಲೈಕೋಪೀನ್ ಮತ್ತು ವಿಟಮಿನ್ ಸಿ ಇರುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತದೆ.

*ದಾಳಿಂಬೆ:  ಇದು ರಕ್ತದ ಸಂಚಲನವನ್ನು ಸುಗಮಗೊಳಿಸುವುದರಿಂದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯಾಹ್ನ ಮಾಡುವ ನಿದ್ದೆ ಒಳ್ಳೆಯದಾ, ಕೆಟ್ಟದಾ, ಇಲ್ಲಿದೆ ಮಾಹಿತಿ