Publish Date: Sat, 03 Jan 2026 (15:25 IST)
Updated Date: Sat, 03 Jan 2026 (15:29 IST)
ಮಧ್ಯಾಹ್ನದ ವೇಳೆ ಮಾಡುವ ನಿದ್ದೆಯಿಂದ ಆರೋಗ್ಯದ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಎರಡೂ ರೀತಿಯ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಈ ಲೇಖನದಲ್ಲಿ ಆ ಎರಡೂ ರೀತಿಯ ಪರಿಣಾಮಗಳನ್ನು ತಿಳಿಸಲಾಗಿದೆ.
ಧನಾತ್ಮಕ ಪರಿಣಾಮ:
ತಕ್ಷಣದ ಚೈತನ್ಯ: ಬೆಳಗ್ಗಿನ ಕೆಲಸದ ನಂತರ ಸುಸ್ತಾಗಿದ್ದರೆ, ಒಂದು ಚಿಕ್ಕ ನಿದ್ದೆ ಮೆದುಳಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ.
ಏಕಾಗ್ರತೆ ಹೆಚ್ಚಳ: ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಮತ್ತು ನೆನಪಿನ ಶಕ್ತಿ ವೃದ್ಧಿಸಲು ಇದು ಸಹಕಾರಿ.
ಒತ್ತಡ ಕಡಿಮೆ: ಮನಸ್ಸಿನ ಆತಂಕ ಮತ್ತು ದಿನದ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಉತ್ತಮ ಮೂಡ್: ನಿದ್ದೆಯ ನಂತರ ಮನಸ್ಸು ಪ್ರಸನ್ನವಾಗಿ ಇರುತ್ತದೆ.
ಋಣಾತ್ಮಕ ಪರಿಣಾಮ:
ಒಮ್ಮೇ ಈ ಅಭ್ಯಾಸವಾದರೆ ಪ್ರತಿ ದಿನಲೂ ನಿದ್ದೆ ಬೇಕೆನಿಸುವ ಸಾಧ್ಯತೆಯಿದೆ.
ಹೊರಗಡೆ ಹೋದಾಗ ನಿದ್ದೆ ಬೇಕೆನಿಸಿ, ತಲೆಭಾರ ಅಥವಾ ಆಲಸ್ಯ ಉಂಟಾಗುವ ಸಾಧ್ಯತೆಯಿದೆ.
ಗಮನಿಸಬೇಕಾದ ಅಂಶಗಳು (ಸರಿಯಾದ ವಿಧಾನ)
ಮಧ್ಯಾಹ್ನದ ನಿದ್ದೆ ಲಾಭದಾಯಕವಾಗಬೇಕೆಂದರೆ ಈ ಕೆಳಗಿನ ಕ್ರಮಗಳನ್ನು ಪಾಲಿಸುವುದು ಉತ್ತಮ:
ಸಮಯ ಮಿತಿ: ಕೇವಲ 10 ರಿಂದ 20 ನಿಮಿಷಗಳ ನಿದ್ದೆ ಅತ್ಯುತ್ತಮ. ಇದನ್ನು 'ಪವರ್ ನ್ಯಾಪ್' ಎನ್ನಲಾಗುತ್ತದೆ.
ಸಮಯದ ಆಯ್ಕೆ: ಮಧ್ಯಾಹ್ನ 1:00 ರಿಂದ 3:00 ಗಂಟೆಯ ಒಳಗೆ ನಿದ್ದೆ ಮಾಡುವುದು ಸೂಕ್ತ. ಸಂಜೆ ಮೇಲೆ ನಿದ್ದೆ ಮಾಡಿದರೆ ರಾತ್ರಿ ನಿದ್ದೆಗೆ ತೊಂದರೆಯಾಗಬಹುದು.
ದೀರ್ಘ ನಿದ್ದೆ ಬೇಡ: ಒಂದು ಗಂಟೆಗಿಂತ ಹೆಚ್ಚು ಕಾಲ ಮಲಗಿದರೆ, ಎದ್ದಾಗ ತಲೆಭಾರ ಅಥವಾ ಆಲಸ್ಯ (Sleep Inertia) ಉಂಟಾಗಬಹುದು.