Select Your Language

Notifications

webdunia
webdunia
webdunia
webdunia

ತೂಕ ಇಳಿಸಿಕೊಳ್ಳುವ ಯೋಜನೆಯಲ್ಲಿರುವವರ ಬೆಳಗ್ಗಿನ ಅಭ್ಯಾಸ ಹೀಗಿರಲಿ

Running

Sampriya

​ಬೆಂಗಳೂರು , ಮಂಗಳವಾರ, 6 ಜನವರಿ 2026 (15:31 IST)
Photo Credit X
ನಿವೇನಾದರೂ ತೂಕ ಇಳಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ, ಬೆಳಗ್ಗಿನ ಜಾವ ಕೆಲ ಅಭ್ಯಾಸಗಳನ್ನು ಮಾಡುವುದರಿಂದ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆಯಬಹುದು. 

ಈ ಸಮಯದಲ್ಲಿ ನೀವು ಪಾಲಿಸುವ ಕೆಲವು ಸಣ್ಣ ಅಭ್ಯಾಸಗಳು ನಿಮ್ಮ ಮೆಟಬಾಲಿಸಂ (ಚಯಾಪಚಯ ಕ್ರಿಯೆ) ಹೆಚ್ಚಿಸಿ, ದಿನವಿಡೀ ಹೆಚ್ಚಿನ ಕ್ಯಾಲೊರಿ ಕರಗಿಸಲು ಸಹಾಯ ಮಾಡುತ್ತದೆ.
ಕೆಲವು ಅಭ್ಯಾಸಗಳು ಇಲ್ಲಿದೆ. 

ಎದ್ದ ತಕ್ಷಣ ಉಗುರುಬೆಚ್ಚಗಿನ ನೀರು ಸೇವನೆ

ಬೆಳಿಗ್ಗೆ ಎದ್ದ ತಕ್ಷಣ ಒಂದು ಅಥವಾ ಎರಡು ಲೋಟ ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಶರೀರದ ಕಸವನ್ನು ಹೊರಹಾಕಲು ಮತ್ತು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ.

ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರಲು ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ.

ಪ್ರೋಟೀನ್ ಯುಕ್ತ ಉಪಹಾರ

ಬೆಳಗಿನ ಉಪಹಾರವು ರಾಜನಂತಿರಲಿ ಎನ್ನುತ್ತಾರೆ. ಆದರೆ ಅದು ಪೌಷ್ಟಿಕವಾಗಿರಬೇಕು. ಕಾರ್ಬೋಹೈಡ್ರೇಟ್‌ಗಳಿಗಿಂತ (ಅಕ್ಕಿ ಪದಾರ್ಥಗಳು) ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಿ.

    ಉದಾಹರಣೆ: ಮೊಟ್ಟೆ, ಹೆಸರುಕಾಳು ಪಲ್ಯ, ಓಟ್ಸ್, ಅಥವಾ ಮೊಳಕೆ ಬಂದ ಕಾಳುಗಳು. ಇದು ನಿಮಗೆ ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.

ಇನ್ನೂ ಕನಿಷ್ಟ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅದರ ಜತೆಗೆ 30 ಗಂಟೆ ವೇಗದ ನಡಿಗೆ ಮಾಡಿ, ಇದು ಕೊಬ್ಬು ಇಳಿಕೆಗೆ ಸುಲಭ ಮಾರ್ಗವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಂದು ಸೇಬು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ