Publish Date: Mon, 09 Mar 2026 (10:37 IST)
Updated Date: Mon, 09 Mar 2026 (10:44 IST)
ಅಹ್ಮದಾಬಾದ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಅರ್ಷ್ ದೀಪ್ ಸಿಂಗ್ ಮೈಗೇ ಚೆಂಡು ಬಿಸಾಕಿದ್ದಕ್ಕೆ ನ್ಯೂಜಿಲೆಂಡ್ ಬ್ಯಾಟಿಗ ಡೆರಿಲ್ ಮಿಚೆಲ್ ಸಿಟ್ಟಿಗೆದ್ದ ಪ್ರಸಂಗ ನಡೆದಿತ್ತು. ಈ ವಿಡಿಯೋ ಇಲ್ಲಿದೆ ನೋಡಿ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 255 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನತ್ತುವುದು ಅಷ್ಟು ಸುಲಭವಾಗಿರಲಿಲ್ಲ. ಚೇಸ್ ಮಾಡುವ ತಂಡದ ಮೇಲೆ ಸಹಜವಾಗಿಯೇ ಒತ್ತಡವಿರುತ್ತದೆ.
ಆದರೆ ನ್ಯೂಜಿಲೆಂಡ್ ಗೆ ನಿನ್ನೆ ಬ್ಯಾಟಿಗರು ಕೈಕೊಟ್ಟಿದ್ದರು. ಆದರೆ ಡೆರಿಲ್ ಮಿಚೆಲ್-ಮಿಚೆಲ್ ಸ್ಯಾಂಟ್ನೆರ್ ಜೋಡಿ ಸಣ್ಣ ಜೊತೆಯಾಟವಾಡಿದ್ದರು. ಡೆರಿಲ್ ಮಿಚೆಲ್ ಬ್ಯಾಟಿಂಗ್ ವೇಳೆ ಅರ್ಷ್ ದೀಪ್ ಸಿಂಗ್ ಬೇಕೆಂದೇ ಕಿರಿಕ್ ತೆಗೆದಿದ್ದಾರೆ.
ಮಿಚೆಲ್ ಹೊಡೆದ ಬಾಲ್ ನ್ನು ಫಾಲೋ ಥ್ರೂನಲ್ಲಿ ಹಿಡಿದ ಅರ್ಷ್ ದೀಪ್ ಆಕ್ರಮಣಕಾರಿಯಾಗಿ ಅವರ ಮೈಗೇ ತಾಕುವಂತೆ ಎಸೆದಿದ್ದಾರೆ. ಇದರಿಂದ ಮಿಚೆಲ್ ಸಿಟ್ಟಿಗೆದ್ದಿದ್ದಾರೆ. ಏನು ಮಾಡ್ತಿದ್ದೀಯಾ ಎಂದು ಅರ್ಷ್ ದೀಪ್ ರತ್ತ ದೌಡಾಯಿಸಿ ಸಿಟ್ಟಿನಿಂದಲೇ ಕೇಳಿದ್ದಾರೆ. ಈ ವೇಳೆ ಅಂಪಾಯರ್ ಮಧ್ಯಪ್ರವೇಶಿಸಿ ಸಮಾಧಾನಿಸಿದ್ದಾರೆ. ಪಂದ್ಯದ ಬಳಿಕ ಡೆರಿಲ್ ಬಳಿ ತೆರಳಿದ ಅರ್ಷ್ ದೀಪ್ ಸಿಂಗ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದ್ದು ಇಬ್ಬರೂ ನಗು ನಗುತ್ತಾ ಕೈಕುಲುಕಿದ್ದಾರೆ.