Publish Date: Thu, 05 Mar 2026 (12:14 IST)
Updated Date: Thu, 05 Mar 2026 (12:17 IST)
ಇತ್ತೀಚೆಗಿನ ದಿನಗಳಲ್ಲಿ ಆಫೀಸ್, ಕಾಲೇಜು, ಶಾಲೆ ಎಂದಿದ್ದರೆ ಮಾತ್ರ ಬೇಗ ಏಳೋದು. ರಜಾ ದಿನ ಬಂತು ಎಂದರೆ ಬೆಳಿಗ್ಗೆ 11 ಗಂಟೆಯವರೆಗೂ ನಿದ್ರೆ ಮಾಡೋದು ಎಲ್ಲರ ಅಭ್ಯಾಸವಾಗಿಬಿಟ್ಟಿದೆ.
ಹಲವರು ರಾತ್ರಿ ಲೇಟ್ ಆಗಿ ಮಲಗಿ ನಿಯಮಿತವಾಗಿ ಬೆಳಿಗ್ಗೆ ನಿಧಾನವಾಗಿ ಏಳುತ್ತಾರೆ. ಈ ರೀತಿ ತಡವಾಗಿ ಏಳುವುದು ಆರೋಗ್ಯಕರ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ. ಇದು ಸಂಪ್ರದಾಯ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಯಿಂದಲೂ ಸರಿಯಾಗಿದೆ. ಯಾಕೆಂದರೆ ಬೆಳಿಗ್ಗೆ ತಡವಾಗಿ ಏಳುವುದರಿಂದ ಕೆಲವು ಆರೋಗ್ಯ ಸಮಸ್ಯೆಯಾಗಬಹುದು. ಯಾವೆಲ್ಲಾ ಆರೋಗ್ಯ ಸಮಸ್ಯೆಯಾಗಬಹುದು ನೋಡಿ.
-ತಡವಾಗಿ ಏಳುವುದರಿಂದ ದೇಹ ನೈಸರ್ಗಿಕವಾಗಿ ಇನ್ಸುಲಿನ್ ಉತ್ಪತ್ತಿ ಮಾಡುವ ಸಮಯ ತಪ್ಪಿ ಹೋಗುತ್ತದೆ. ಇದರಿಂದ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆಯಿದೆ. ಅದೇ ರೀತಿ ತೂಕ ಹೆಚ್ಚಳ ಅಥವಾ ಬೊಜ್ಜಿನ ಸಮಸ್ಯೆ ಕಂಡುಬರಬಹುದು.
-ನಿಯಮಿತವಾಗಿ ತಡವಾಗಿ ಏಳುವುದರದಿಂದ ಏಕಾಗ್ರತೆ, ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳಗಿನ ಸೂರ್ಯ ಮೈಗೆ ಸೋಕದೇ ನಿಮ್ಮ ಮನೋಲಹರಿ ಮೇಲೆ ದುಷ್ಪರಿಣಾಮ ಬೀರಬಹುದು.
-ತಡವಾಗಿ ಏಳುವವರಿಗೆ ಹೃದಯದ ಸಮಸ್ಯೆ, ರಕ್ತದೊತ್ತಡದ ಸಮಸ್ಯೆ ಬರುವ ಸಂಭವವಿದೆ. ಅದಕ್ಕೇ ಆರೋಗ್ಯಕರ ನಿದ್ದೆ ಆರೋಗ್ಯಕರ ಜೀವನಕ್ಕೆ ದಾರಿ ಎನ್ನುವುದು.