Publish Date: Mon, 02 Mar 2026 (10:44 IST)
Updated Date: Mon, 02 Mar 2026 (10:52 IST)
ಬೇಕರಿಗಳಿಂದ ಸ್ವೀಟ್ ಖರೀದಿ ಮಾಡಿ ಚಪ್ಪರಿಸಿಕೊಂಡು ತಿನ್ನುವವರು ಈ ವಿಡಿಯೋವನ್ನು ತಪ್ಪದೇ ನೋಡಿ. ಇದೆಂಥಾ ಅಸಹ್ಯ ಎಂದು ನಿಮಗೇ ಅನಿಸಬಹುದು.
ಹೊರಗಡೆ ಸಿಹಿ ತಿನಿಸು ಖರೀದಿ ಮಾಡುವಾಗ ಅದು ಎಷ್ಟು ಸುರಕ್ಷಿತ, ಆರೋಗ್ಯಕರ ಎಂದು ಅನೇಕ ಬಾರಿ ಪ್ರಶ್ನೆ ಬರುತ್ತದೆ. ಹೊರಗಿನ ಆಹಾರ ಸೇವನೆಯಿಂದ ಅನೇಕ ಬಾರಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಅದನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಇದೇ ರೀತಿ ರಾಜಸ್ಥಾನದಲ್ಲಿ ಗಲೀಜಾದ ಜಾಗದಲ್ಲಿ ಸಿಹಿ ತಿನಿಸು ತಯಾರಿ ಮಾಡುವ ಜಾಗದ ವಿಡಿಯೋವೊಂದು ವೈರಲ್ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರು ವ್ಯಕ್ತಿಗಳು ದೊಡ್ಡ ಬಾಣಲೆಯಲ್ಲಿ ಸಿಹಿ ತಿನಿಸಿಗೆ ಪಾಕ ಮಾಡುತ್ತಿರುತ್ತಾರೆ.
ಈ ಪೈಕಿ ಇಬ್ಬರೂ ಆ ಬಾಣಲೆಗೇ ಕಾಲು ಹಾಕಿ ತುಳಿದು ತಿರುವುತ್ತಿದ್ದಾರೆ. ಇದನ್ನು ನೋಡಿದರೆ ನಿಮಗೆ ಅಸಹ್ಯವಾಗದೇ ಇರದು. ಇಂಥಾ ಸಿಹಿ ತಿನಿಸನ್ನು ತಿಂದರೆ ಬರಬಾರದ ರೋಗಗಳೆಲ್ಲಾ ಬರೋದು ಗ್ಯಾರಂಟಿ. ಈ ವಿಡಿಯೋ ಇಲ್ಲಿದೆ ನೋಡಿ.