Daily Horoscope

Select Your Language

Notifications

webdunia
webdunia
webdunia
webdunia

ಬೆನ್ನು ನೋವಿನ ಸಮಸ್ಯೆಯಿದ್ದರೆ ಬೆಡ್ ಬದಲು ನೆಲದಲ್ಲಿ ಮಲಗಬಹುದೇ

Back pain
ಬೆನ್ನು ನೋವಿನ ಸಮಸ್ಯೆ ಇರುವವರು ಬೆಡ್ ಬಿಟ್ಟು ನೆಲದ ಮೇಲೆ ಮಲಗಬಹುದೇ? ಹೀಗೊಂದು ಅನುಮಾನ ಅನೇಕರಲ್ಲಿರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.

ಬೆನ್ನು ನೋವು ಎನ್ನುವುದು ಇತ್ತೀಚೆಗೆ ಪ್ರತಿಯೊಬ್ಬರ ಸಮಸ್ಯೆಯಾಗಿದೆ. ಬಹುತೇಕ ಜೀವನ ಶೈಲಿ, ನಾವು ಮಾಡುವ ಕೆಲಸಗಳೇ ಇದಕ್ಕೆ ಕಾರಣವಾಗುತ್ತಿದೆ. ಅತಿಯಾದ ಬೆನ್ನು ನೋವಿದ್ದಾಗ ನಾವು ಮಲಗುವ ಭಂಗಿಯನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ.

ವಿಶೇಷವಾಗಿ ಬೆನ್ನು ನೋವು ಇರುವವರು ಮಂಚದ ಮೇಲೆ ಮಲಗುವ ಬದಲು ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಬಹುದು. ಗಟ್ಟಿ ನೆಲ ಬೆನ್ನಿಗೆ ಮತ್ತಷ್ಟು ಬಲ ನೀಡುತ್ತದೆ. ಅಲ್ಲದೆ, ಫ್ಲ್ಯಾಟ್ ನೆಲದಲ್ಲಿ ಮಲಗುವುದರಿಂದ ಬೆನ್ನು ಬಾಗುವ ಪ್ರಸಂಗವೂ ಇಲ್ಲ.

ಸಮತಟ್ಟಾದ ನೆಲದ ಮೇಲೆ ಮಲಗುವುದರಿಂದ ನಮ್ಮ ದೇಹ ಭಾರ ಸಮಾನವಾಗಿ ಬೀಳುತ್ತದೆ. ಒಂದು ಕಡೆಗೆ ಹೆಚ್ಚು ಒಂದು ಕಡಿಮೆಗೆ ಬೀಳುವ ಪ್ರಮೇಯವೇ ಇರುವುದಿಲ್ಲ. ಹಾಗಂತ ಬರಿ ನೆಲದಲ್ಲಿ ಮಲಗಬೇಡಿ. ಕನಿಷ್ಠ ಚಾಪೆಯನ್ನಾದರೂ ಹಾಕಿಕೊಂಡು ಮಲಗಿ. ಇಲ್ಲದೇ ಹೋದರೆ ರಕ್ತ ಸಂಚಾರ ಸರಿಯಾಗಿ ಆಗದೇ, ದೇಹ ಭಾರದಿಂದಲೇ ನೋವು ಹೆಚ್ಚಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳಲ್ಲಿ ಕಾಡುತ್ತಿರುವ ತಲೆನೋವು ಈ ಕಾರಣದಿಂದಾಗಿರಬಹುದು