ಬೆಂಗಳೂರು: ಸಂಕ್ರಾಂತಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿದೆ. ಸಂಕ್ರಾಂತಿ ಹಬ್ಬದ ದಿನ ಈ ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ.
ಸಂಕ್ರಾಂತಿ ಎಂದರೆ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಕಾಲ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸಕಲ ದೋಷಗಳ ನಿವಾರಣೆಗೆ ಬಡವರಿಗೆ ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.
ವಿಶೇಷವಾಗಿ ಇಂದು ಮೂರು ವಸ್ತುಗಳನ್ನು ದಾನ ಮಾಡಲು ಮರೆಯಬೇಡಿ ಎಳ್ಳು, ಬೆಲ್ಲ ಮತ್ತು ಮೊಸರು. ಇದಕ್ಕೆ ಕಾರಣವೂ ಇದೆ.
ಎಳ್ಳು ದಾನ: ಕಪ್ಪು ಎಳ್ಳು ದಾನ ಮಾಡುವುದರಿಂದ ಪಾಪ ತೊಡೆದು ಹೋಗುವುದು. ಜೊತೆಗೆ ಸಂಪತ್ತು ವೃದ್ಧಿಯಾಗಿ ಹಿರಿಯರ ಆಶೀರ್ವಾದ ಸಿಗುವುದು.
ಬೆಲ್ಲ: ಬೆಲ್ಲವನ್ನು ದಾನ ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಸಿಗುತ್ತದೆ.
ಮೊಸರು: ಮನೆಯಲ್ಲಿ ದಾರಿದ್ರ್ಯ, ಹಣಕಾಸಿನ ತಾಪತ್ರಯಗಳು ದೂರವಾಗಬೇಕಾದರೆ ಮೊಸರು ದಾನ ಮಾಡಬೇಕು.
ಇದರ ಜೊತೆಗೆ ಇಂದು ಕುಂಬಳಕಾಯಿ, ಕಂಬಳಿ,ತುಪ್ಪ, ಹಸಿರು ಬಣ್ಣದ ಬಳೆ ದಾನ ಮಾಡುವುದೂ ಅತ್ಯಂತ ಶ್ರೇಯಸ್ಕರ ಎಂದು ನಂಬಲಾಗಿದೆ.