Daily Horoscope

Select Your Language

Notifications

webdunia
webdunia
webdunia
webdunia

ಕರ್ನಾಟಕದ ಮತ್ತೊಂದು ಕೇರಳ ಪ್ರೀತಿ: ಕೇರಳದಿಂದ ಟೆಂಡರ್ ಇಲ್ಲದೇ ಟ್ರಾನ್ಸ್ ಫಾರ್ಮರ್ ಗೆ ಆರ್ಡರ್ ಆರೋಪ

Electricity
ಬೆಂಗಳೂರು: ಕೋಗಿಲು ಲೇಔಟ್ ನಿವಾಸಿಗಳ ಒತ್ತುವರಿ ವಿವಾದ ವಿಚಾರದಲ್ಲಿ ಕೇರಳ ಸಿಎಂ ಅಣತಿ ಮೇರೆಗೆ ನಡೆದುಕೊಂಡು ಕರ್ನಾಟಕ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಇದೀಗ ಮತ್ತೆ ಕರ್ನಾಟಕ ಸರ್ಕಾರದ ಕೇರಳ ಪ್ರೀತಿ ಬಯಲಾಗಿದೆ.

ಇತರೆ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಟ್ರಾನ್ಸ್ ಫಾರ್ಮರ್ ಇದ್ದರೂ ಕೇರಳದಿಂದ ರಾಜ್ಯಕ್ಕೆ ಬೇಕಾದ ಟ್ರಾನ್ಸ್ ಫಾರ್ಮರ್ ಖರೀದಿ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಸದನದಲ್ಲಿ ಇಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

‘ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಕಡಿಮೆ ದರಕ್ಕೆ ವಿದ್ಯುತ್ ಲಭ್ಯವಿದ್ದರೂ ರಾಜ್ಯ ಸರ್ಕಾರ ಕೇರಳದಿಂದ ವಿದ್ಯುತ್ ಖರೀದಿಸಿದ್ದು ಯಾಕೆ? ಕರ್ನಾಟಕದ ಕಂಪನಿಗಳಿಂದ ಖರೀದಿ ಮಾಡುತ್ತಿದ್ದರೆ ನಮ್ಮ ರಾಜ್ಯದ ಜನತೆಗೆ ಉದ್ಯೋಗ ಸಿಗುತ್ತಿತ್ತು. ಟೆಂಡರ್ ಪ್ರಕ್ರಿಯೆ ಕರೆಯದೇ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಇಂಧನ ಸಚಿವ ಕೆಜೆ ಜಾರ್ಜ್ ಕಡಿಮೆ ದರದಲ್ಲಿ ಕೇರಳ ಸಂಸ್ಥೆಯಿಂದ ಲಭ್ಯವಿದ್ದ ಕಾರಣಕ್ಕೇ ಅಲ್ಲಿಂದ ಖರೀದಿ ಮಾಡಲಾಗಿದೆ ಎಂದಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹ ಖರೀದಿಗಳು ನಡೆದಿದ್ದವು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

pic.twitter.com/SgSMbm4udu

 

— BJP Karnataka (@BJP4Karnataka) March 9, 2026

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳಕ್ಕೆ ರಾಹುಲ್ ಗಾಂಧಿ ಘೋಷಿಸಿದ ಪಂಚ ಗ್ಯಾರಂಟಿಗಳು ಏನೆಲ್ಲಾ ನೋಡಿ