Publish Date: Wed, 28 Jan 2026 (13:52 IST)
Updated Date: Wed, 28 Jan 2026 (14:01 IST)
ಭಾರಾಮತಿ: ಮಹಾರಾಷ್ಟ್ರದ ಭಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಸುಟ್ಟು ಕರಕಲಾದ ದೇಹಗಳ ನಡುವೆ ಡಿಸಿಎಂ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದೇ ರೋಚಕ.
ಇಂದು ಸಂಭವಿಸಿದ ಘೋರ ದುರಂತದಲ್ಲಿ ಡಿಸಿಎಂ ಅಜಿತ್ ಪವಾರ್ ಮತ್ತು ಐವರು ವಿಮಾನ ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಮಾನ ಪತನವಾದ ಬೆನ್ನಲ್ಲೇ ಸುಟ್ಟು ಭಸ್ಮವಾಗಿದೆ. ಇದರಿಂದಾಗಿ ಮೃತದೇಹಗಳೂ ಗುರುತಿಸಲಾಗದ ಸ್ಥಿತಿಯಲ್ಲಿತ್ತು.
ಇದರ ನಡುವೆ ಯಾರ ಮೃತದೇಹ ಎಂದು ಗುರುತಿಸುವುದೇ ಹರಸಾಹಸವಾಗಿದೆ. ಈ ನಡುವೆ ಅಜಿತ್ ಪವಾರ್ ಕೈಯಲ್ಲಿದ್ದ ವಾಚ್ ನಿಂದ ಅವರ ಮೃತದೇಹವನ್ನು ಪತ್ತೆ ಹೆಚ್ಚಲಾಗಿದೆ ಎನ್ನಲಾಗಿದೆ. ಅಜಿತ್ ಪವಾರ್ ಅಲ್ಲದೆ ಐವರು ಸಾವನ್ನಪ್ಪಿದ್ದಾರೆ.
ಈ ಪೈಕಿ ಅಜಿತ್ ಪವಾರ್ ಆಪ್ತ ವಿಧಿಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ವಿಮಾನ ಪೈಲಟ್ ಗಳಾದ ಕ್ಯಾ. ಸುಮಿತ್ ಕಪೂರ್, ಕ್ಯಾ. ಶಾಂಭವಿ ಪಾಠಕ್ ಕೂಡಾ ಸಾವನ್ನಪ್ಪಿದ್ದಾರೆ.