Select Your Language

Notifications

webdunia
webdunia
webdunia
webdunia

ಅನುಮಾನ ಹುಟ್ಟಿಸಿದ ಸಿಜೆ ರಾಯ್ ಸಾವು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

Businessman CJ Roy

Sampriya

ಬೆಂಗಳೂರು , ಮಂಗಳವಾರ, 24 ಫೆಬ್ರವರಿ 2026 (10:23 IST)
ಬೆಂಗಳೂರು: ದೇಶದ ಖ್ಯಾತ ಉದ್ಯಮಿ ಸಿ.ಜೆ.ರಾಯ್  ಆತ್ಮಹತ್ಯೆ ಪ್ರಕರಣ ಸಂಬಂಧ ಬಹುತೇಕ ತನಿಖೆ ಮುಗಿದಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಹಿಂದಿನ ಕಾರಣಗಳು ಬಯಲಾಗಿದೆ. 

ಎಸ್‌ಐಟಿ ಸಾವಿನ ತನಿಖೆಯಲ್ಲಿ ಸಿಜೆ ರಾಯ್ ಆತ್ಮಹತ್ಯೆಯ ಹಿಂದಿನ ಕಾರಣಗಳು ಬಯಲಾಗಿದೆ. ಒಂದೇ ಕಾರಣಗಳಿಂದ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿಲ್ಲ ಬದಲಾಗಿ ಬೇರೆ ಬೇರೆ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಲ್ಯಾವೀಸ್ ಲೈಫ್, ಮಾನಸಿಕ ಒತ್ತಡ, ವ್ಯವಹಾರಿ ಸಮಸ್ಯೆಗಳು ಹೀಗೆ ಹಲವು ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 

ಎಸ್‌ಐಟಿ ಅಧಿಕಾರಿಗಳು ಅಷ್ಟಕ್ಕೆ ಸುಮ್ಮನಾಗದೇ ಮತ್ತಷ್ಟು ಕಾರಣಗಳು ಹುಡುಕಲು ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ರೂಂನಲ್ಲಿ ಸಿಕ್ಕಿರುವ ಡೈರಿ, ಶೂಟ್ ಮಾಡಿಕೊಂಡ ಪಿಸ್ತೂಲ್, ಮೊಬೈಲ್, ರೂಂ ಡೋರ್‌ನ ಲಾಕರ್ ಹೀಗೆ 30ಕ್ಕೂ ಹೆಚ್ಚು ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಮುಂದಿನ ವಾರದ ಒಳಗಾಗಿ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಸೇರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನತೆಗೆ ಇಂದಿನ ರಾಜ್ಯದ ಹವಾಮಾನ ಇಲ್ಲಿದೆ