Select Your Language

Notifications

webdunia
webdunia
webdunia
webdunia

Video: ಕೂತ್ಕೋ ಅಲ್ಲಿ.. ಭಾಷಣ ಮಾಡುವಾಗಲೂ ಬೆಂಬಿಡದ ಪ್ರದೀಪ್ ಈಶ್ವರ್ ನ ಗದರಿದ ಡಿಕೆ ಶಿವಕುಮಾರ್

Pradeeo eshwar dk shivkumar
Photo Credit X
ಬೆಂಗಳೂರು: ಭಾಷಣ ಮಾಡುವ ವೇಳೆ ತನ್ನ ಬೆನ್ನ ಹಿಂದೆ ನಿಂತಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಹಾಗೂ ಪ್ರದೀಪ್ ಈಶ್ವರ್‌ ಅವರು ವೇದಿಕೆಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್  ಭಾಷಣ ಮಾಡುತ್ತಿದ್ದಾಗ ಪ್ರದೀಪ್ ಈಶ್ವರ್ ಹಿಂದೆಯೇ ಬಂದು ನಿಂತಿದ್ದಾರೆ. ಇದನ್ನು ನೋಡಿದ ಡಿಸಿಎಂ ಬೆನ್ನು ತಟ್ಟಿ ಹೋಗಿ ಕುಳಿತುಕೊಳ್ಳಿ ಎಂದು ತಳ್ಳಿದ್ದಾರೆ. ಕೂಡಲೇ ಪ್ರದೀಪ್ ಈಶ್ವರ್ ವೇದಿಕೆಯಲ್ಲಿದ್ದ ಕುರ್ಚಿಯಲ್ಲಿ ಕೂತಿದ್ದಾರೆ. 

ಒಟ್ಟಾರೆ ಹಿಂದೆಯೇ ಹಿಂದೆಯೇ ಬಂದ ಪ್ರದೀಪ್ ಈಶ್ವರ್‌ ನಡವಳಿಕೆಗೆ ಡಿಸಿಎಂ ಗರಂ ಆಗಿದ್ದಾರೆ. 

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಹೆಚ್ಚುತ್ತಲೇ ಇದೆ. ಸಿದ್ದರಾಮಯ್ಯರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಈಶ್ವರ್‌ ಅವರು ಇನ್ನೂ ಸಚಿವ ಸಂಪುಟ ಬದಲಾವಣೆಗೆ ಒತ್ತಾಯಿಸಿ ಕೂಡಾ ಪತ್ರವನ್ನು ಬರೆದಿದ್ದಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುರ್ಚಿಗಾಗಿ ಪೈಪೋಟಿ ಹೆಚ್ಚಿದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಭುಗಿಲೆದ್ದ ಸಚಿವ ಸಂಪುಟ ಪುನರ್‌ರಚನೆ