ಬೆಂಗಳೂರು: ಕೇಂದ್ರದ ವಿರುದ್ಧ ಮನರೇಗಾ ಉಳಿಸಿ ಹೋರಾಟದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅಪರೂಪದ ಸನ್ನಿವೇಶವೊಂದು ಎಲ್ಲರ ಗಮನ ಸೆಳೇದಿದೆ.
ಇಂದು ಕಾಂಗ್ರೆಸ್ ಮನರೇಗಾ ಉಳಿಸಿ ಹೋರಾಟ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕಾಂಗ್ರೆಸ್ ಹೈಕಮಾಂಡ್ ನಾಯಕ ರಣದೀಪ್ ಸುರ್ಜೇವಾಲ, ಸಚಿವ ಎಚ್ ಮಹದೇವಪ್ಪ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.
ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು ಸರಿಯಲ್ಲ. ಹಿಂದೆ ಇದ್ದಂತೇ ಮತ್ತೆ ಮನರೇಗಾ ಯೋಜನೆ ಪುನಸ್ಥಾಪಿಸಬೇಕು. ಬದಲಾವಣೆಯಿಂದಾಗಿ ರಾಜ್ಯಗಳಿಗೆ ಹೆಚ್ಚುವರಿ ಹೊರೆಯಾಗಿದೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ತಾವೇ ಕೈಯಾರೆ ಡಿಕೆ ಶಿವಕುಮಾರ್ ಗೆ ವಸ್ತ್ರದ ಪೇಟ ತೊಡಿಸಿ ಎಲ್ಲರ ಗಮನ ಸೆಳೆದರು. ರಾಜಕೀಯವಾಗಿ ಇಬ್ಬರೂ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದೆಲ್ಲಾ ಎಷ್ಟೇ ರೂಮರ್ ಗಳಿದ್ದರೂ ವೇದಿಕೆಯಲ್ಲಿ ಇಬ್ಬರ ಆತ್ಮೀಯ ಕ್ಷಣ ಎಲ್ಲರ ಗಮನ ಸೆಳೆಯಿತು.