Publish Date: Sun, 01 Feb 2026 (18:55 IST)
Updated Date: Sun, 01 Feb 2026 (18:57 IST)
ಬೆಂಗಳೂರು: ತನ್ನ ಪಿಸ್ತೂಲ್‌ನಿಂದ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ ರಾಯ್‌ಗೆ ಕ್ರಿಶ್ಚಿಯನ್ ಸಮುದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಅವರ ನೆಚ್ಚಿನ ಬನ್ನೇರುಘಟ್ಟ ರೆಸಾರ್ಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಇದಕ್ಕೂ ಮೊದಲು ರಾಯ್ ಅವರ ಪತ್ನಿ, ಮಕ್ಕಳು ಹಣೆಗೆ ಮುತ್ತಿಡುವ ಮೂಲಕ ಕೊನೆಯ ಕಣ್ಣೀರ ವಿದಾಯವನ್ನು ಹೇಳಿದರು.
ಬೌರಿಂಗ್ ಆಸ್ಪತ್ರೆಯಲ್ಲಿದ್ದ ಸಿ.ಜೆ ರಾಯ್ ಅವರ ಮೃತದೇಹವನ್ನ ಕುಟುಂಬಸ್ಥರು ಬಂದು ಬನ್ನೇರುಘಟ್ಟ ರೆಸಾರ್ಟ್‌ಗೆ ತೆಗೆದುಕೊಂಡು ಹೋದರು.
ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಸಿ.ಜೆ. ರಾಯ್ ರೆಸಾರ್ಟ್‌ನಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ಸ್ನೇಹಿತರು, ಸಂಸ್ಥೆಯ ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಸಿ.ಜೆ ರಾಯ್ ಅವರ ಅಂತಿಮ ದರ್ಶನ ಪಡೆದರು.