ದನ ಮೇಯಿಸಲು ಬಂದ ಯುವತಿಯ ಮೇಲೆ ಸಿಆರ್ ಪಿಎಫ್ ಸಿಬ್ಬಂದಿಯಿಂದ ಅತ್ಯಾಚಾರ

ಶುಕ್ರವಾರ, 31 ಜುಲೈ 2020 (09:49 IST)
ಚತ್ತೀಸ್ ಗಢ್ : ಚತ್ತೀಸ್ ಗಢದ ಬಂಡಾಯ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ 21 ವರ್ಷದ ಯುವತಿಯ ಮೇಲೆ ಸಿಆರ್ ಪಿಎಫ್ ಸಿಬ್ಬಂದಿ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಸುಕ್ಮಾದಲ್ಲಿ ಮಾವೋ ವಿರೋಧಿ ಕಾರ್ಯಾಚರಣೆಗಾಗಿ ಸಿರ್ ಪಿಎಫ್ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಜುಲೈ 27ರಂದು ದೋರ್ನಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರೆಸೈನಿಕ ಪಡೆಗಳ ದುಬ್ಬಕೋಟಾ ಶಿಬಿರದ ಬಳಿ ಸಂತ್ರಸ್ತೆ ದನಗಳನ್ನು ಮೇಯಿಸಲು ಹೋಗದ್ದಾಗ ಸಿಆರ್ ಪಿಎಫ್ ಸಿಬ್ಬಂದಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಈ ಬಗ್ಗೆ ಸಂತ್ರಸ್ತೆ ಮತ್ತು ಆಕೆಯ ಪೋಷಕರು ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿ ಸಿಆರ್ ಪಿಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೋಫಿ ನೀಡುವುದಾಗಿ 3 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋದ ಚಿಕ್ಕಪ್ಪ ಆಮೇಲೆ ಮಾಡಿದ್ದೇನು?