Publish Date: Fri, 20 Feb 2026 (10:35 IST)
Updated Date: Fri, 20 Feb 2026 (10:39 IST)
ಬೆಂಗಳೂರು: ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ನೀಡಿದ ಸರ್ಪೈಸ್ ಗೆ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಸಿನಿಮಾ ತಂಡ ಬರ್ತ್ ಡೇ ಟೀಸರ್ ಬಿಡುಗಡೆ ಮಾಡಿತ್ತು. ಆದರೆ ಈಗ ಸಿನಿಮಾ ಬಿಡುಗಡೆಗೆ ಮುನ್ನ ರಿಯಲ್ ಟೀಸರ್ ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಒಂದು ಪಾತ್ರದಲ್ಲಿ ಉದ್ದ ಗಡ್ಡ, ಕೂದಲು ಬಿಟ್ಟುಕೊಂಡು ಏಕ್ ದಂ ಆಕ್ಷನ್ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಪಾತ್ರದಲ್ಲಿ ಗಡ್ಡ, ಮೀಸೆಯಿಲ್ಲದೇ ಇನ್ನೂ ಚಿಕ್ಕವಯಸ್ಸಿನ ಹುಡುಗನ ರೀತಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದು ದ್ವಿಪಾತ್ರವೇ ಇಲ್ಲಾ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದಾ ಎಂದು ಸ್ಪಷ್ಟವಾಗಿಲ್ಲ.
ಆದರೆ ಯಶ್ ಹೊಸ ಲುಕ್ ಅಭಿಮಾನಿಗಳಿಗೆ ಸರ್ಪೈಸ್ ಆಗಿದೆ. ಈ ಟೀಸರ್ ನಲ್ಲೂ ಆಕ್ಷನ್ ಸನ್ನಿವೇಶಗಳು, ರಕ್ತ ಸುರಿಸೋ ಸೀನ್ ಗಳೇ ತುಂಬಿದೆ. ಆದರೆ ಟೀಸರ್ ತುಂಬಾ ಯಶ್ ಖದರ್ ಕಾಣಿಸುತ್ತಿದೆ. ಈ ಆಕ್ಷನ್ ಥ್ರಿಲ್ಲರ್ ಟೀಸರ್ ಲಿಂಕ್ ಇಲ್ಲಿದೆ ನೋಡಿ.