ಬೆಂಗಳೂರು: ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರದ ಹೆಸರು RAYA. ಈ ಹೆಸರಿಗೂ ಯಶ್ ಗೂ ಇದೆ ಸ್ಪೆಷಲ್ ನಂಟು.
ಎಷ್ಟು ಜನ ಗಮನಿಸಿದ್ದೀರೋ ಇಲ್ವೋ ಗೊತ್ತಿಲ್ಲ. ಆದರೆ ಯಶ್ ವೈಯಕ್ತಿಕ ಜೀವನದಲ್ಲಿ ಇಂಗ್ಲಿಷ್ ವರ್ಣಮಾಲೆಯ ಆರ್, ವೈ, ಎಗೆ ವಿಶೇಷ ಸ್ಥಾನವಿದೆ. ಪತ್ನಿ ರಾಧಿಕಾ ಹೆಸರು ಆರಂಭವಾಗುವುದು ಆರ್,ಎ ಲೆಟರ್ ನಿಂದ. ಯಶ್ ಹೆಸರು ಆರಂಭವಾಗುವುದು ವೈ,ಎ ಲೆಟರ್ ನಿಂದ. ಮಕ್ಕಳಾದ ಐರಾ ಹೆಸರು ಆರಂಭವಾಗುವುದು ಎ, ವೈ ಲೆಟ್ ನಿಂದ. ಮಗ ಯಥರ್ವ್ ಹೆಸರು ಆರಂಭವಾಗುವುದೂ ವೈ,ಎ ಲೆಟರ್ ನಿಂದ.
ತಮ್ಮ ಮಕ್ಕಳ ಹೆಸರಿನಲ್ಲೂ ಪತ್ನಿ ರಾಧಿಕಾ ಮತ್ತು ತಮ್ಮ ಹೆಸರಿನ ಲೆಟರ್ ಗಳೇ ಬರುವಂತೆ ಯಶ್ ಹೆಸರಿಟ್ಟಿದ್ದಾರೆ. ಇದೀಗ ಟಾಕ್ಸಿಕ್ ಸಿನಿಮಾದ ಪಾತ್ರದ ವಿಚಾರಕ್ಕೆ ಬರುವುದಾದರೆ ರಾಯ ಹೆಸರಿನಲ್ಲಿ ಆರ್, ಎ, ವೈ ಲೆಟರ್ ಇದೆ.
ಮೊದಲ ಎರಡು ಲೆಟರ್ ಆರ್ ಮತ್ತು ಎ ಅಂದರೆ ಪತ್ನಿ ರಾಧಿಕಾ ಹೆಸರಿನ ಲೆಟರ್ ಗಳು. ಕೊನೆಯ ಎರಡು ಲೆಟರ್ ಗಳು ವೈ, ಎ. ಅಂದರೆ ಇದು ಯಶ್ ಹೆಸರಿನ ಆರಂಭದ ಲೆಟರ್ ಗಳು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಈ ಹೆಸರಿಟ್ಟುಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.