Select Your Language

Notifications

webdunia
webdunia
webdunia
webdunia

Daddy is Home: ಟಾಕ್ಸಿಕ್ ಸ್ಟೈಲ್ ನಲ್ಲಿ ಜೆಡಿಎಸ್ ಟೀಸರ್, ಎಚ್ ಡಿ ಕುಮಾರಸ್ವಾಮಿ ಗುಡ್ ನ್ಯೂಸ್ Video

HD Kumaraswamy
Photo Credit: X
ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದ ಟೀಸರ್ ಶೈಲಿಯಲ್ಲೇ ಈಗ ಜೆಡಿಎಸ್ ಪಕ್ಷ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಎಚ್ ಡಿ ಕುಮಾರಸ್ವಾಮಿ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟಿದೆ.

ಎಚ್ ಡಿ ಕುಮಾರಸ್ವಾಮಿ ಈಗ ಕೇಂದ್ರ ಸಚಿವರು. ಹೀಗಾಗಿ ಅವರು ರಾಜ್ಯ ರಾಜಕೀಯದಲ್ಲಿ ಮೊದಲಿನಂತೆ ಸಕ್ರಿಯರಾಗಿಲ್ಲ. ಹಾಗಿದ್ದರೂ ಪ್ರಮುಖ ವಿಚಾರಗಳು ಬಂದಾಗ ರಾಜ್ಯ ಸರ್ಕಾರವನ್ನು ಕುಟುಕುತ್ತಲೇ ಇರುತ್ತಾರೆ.

ಇದೀಗ ಜೆಡಿಎಸ್ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಎಚ್ ಡಿ ಕುಮಾರಸ್ವಾಮಿ ಟೀಸರ್ ಹೊರಬಿಟ್ಟಿದೆ. ಥೇಟ್ ಟಾಕ್ಸಿಕ್ ಶೈಲಿಯ ಎಐ ವಿಡಿಯೋವೊಂದನ್ನು ಹಂಚಿಕೊಂಡು ಡ್ಯಾಡೀ ಈಸ್ ಹೋಮ್ ಎಂದಿದೆ. ಕೊನೆಯಲ್ಲಿ 2028 ಕ್ಕೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಆ ವರ್ಷದಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಬರುವ ಸುಳಿವು ನೀಡಿದೆ.

ಟಾಕ್ಸಿಕ್ ಶೈಲಿಯ ಜೆಡಿಎಸ್ ಟೀಸರ್ ಈಗ ಭಾರೀ ವೈರಲ್ ಆಗಿದೆ. ಇದರ ಜೊತೆಗೆ ಸದ್ಯಕ್ಕೆ ರಾಜ್ಯದಲ್ಲಿ ಈಗ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿಯುವ ಪ್ರಬಲ ಪ್ರತಿಪಕ್ಷ ನಾಯಕನ ಅಗತ್ಯವಿದೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆ ವೇಳೆ ಎಚ್ ಡಿಕೆ ರಾಜ್ಯ ರಾಜಕಾರಣಕ್ಕೆ ಮರಳುತ್ತಿರುವುದು ಅವರ ಬೆಂಬಲಿಗರಿಗೆ ನಿಜಕ್ಕೂ ಗುಡ್ ನ್ಯೂಸ್ ಆಗಿದೆ.


#ToxicOnMARCH19th pic.twitter.com/4YnlBXXL1X

 

— ????????????????????????????????ᵗᵒˣⁱᶜ ¹⁹ ⁰³ ²⁶ (@iamyashikarsy) January 9, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ವಾರಂತ್ಯದಲ್ಲಿ ಈ ಜಿಲ್ಲೆಗಳಿಗೆ ಮಳೆಯ ಸೂಚನೆ