ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಚಳಿಯಾಗಿತ್ತು. ಆದರೆ ಈ ವಾರಂತ್ಯಕ್ಕೆ ಕೆಲವು ಜಿಲ್ಲೆಗಳಿಗೆ ತುಂತುರು ಮಳೆಯ ಸೂಚನೆಯೂ ಇದೆ. ಯಾವೆಲ್ಲಾ ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ, ವಾರದ ಹವಾಮಾನ ವರದಿ ಇಲ್ಲಿದೆ ನೋಡಿ.
ಇಂದು ಮತ್ತೆ ನಾಳೆ ರಾಜ್ಯದ ಕನಿಷ್ಠ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದೆ. ಆದರೆ ಚಳಿಯ ಜೊತೆಗೆ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಮಳೆಯ ಸೂಚನೆಯೂ ಇದೆ. ಇಂದು ರಾಜ್ಯದ ಕನಿಷ್ಠ ತಾಪಮಾನ 18 ಡಿಗ್ರಿಯಷ್ಟಿದ್ದರೆ ಗರಿಷ್ಠ ತಾಪಮಾನ 23 ಡಿಗ್ರಿಯಷ್ಟು ಕಂಡುಬರಲಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 31 ಡಿಗ್ರಿ ಮತತು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟು ಕಂಡುಬರಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣ ಮತ್ತು ನಾಳೆ ಲಘು ಮಳೆಯಾಗುವ ಸೂಚನೆಯಿದೆ.
ಉಳಿದಂತೆ ಚಿತ್ರದುರ್ಗ, ವಿಜಯಪುರ, ಬೀದರ್, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ಅಥವಾ ಬಿಸಿಲಿನ ವಾತಾವರಣವಿರಲಿದೆ.