ಬೆಂಗಳೂರು: ಕಳೆದ ವಾರ ಕೊಂಚ ಮಟ್ಟಿಗೆ ತಗ್ಗಿದ್ದ ಚಳಿ ಈ ವಾರ ಮತ್ತೆ ಹೆಚ್ಚಾಗಲಿದೆ. ರಾಜ್ಯದ ಈ ವಾರದ ಹವಾಮಾನ ಮತ್ತಷ್ಟು ಹದಗೆಡಬಹುದು ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಕಳೆದ ವಾರ ರಾಜ್ಯದಲ್ಲಿ ಕನಿಷ್ಠ ತಾಪಮಾನ 18 ಡಿಗ್ರಿಯವರೆಗೂ ತಲುಪಿತ್ತು. ಇದಕ್ಕೆ ಮೊದಲು 16 ಡಿಗ್ರಿಯಷ್ಟಿತ್ತು. ಹೀಗಾಗಿ ವಾರದ ಮಧ್ಯಭಾಗದಿಂದ ಚಳಿ ಕೊಂಚ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಈ ವಾರ ತಾಪಮಾನ ಮತ್ತಷ್ಟು ಕುಸಿತವಾಗಲಿದೆ.
ಹವಾಮಾನ ವರದಿಗಳ ಪ್ರಕಾರ ಈ ವಾರ ರಾಜ್ಯದಲ್ಲಿ ಕನಿಷ್ಠ ತಾಪಮಾನ ಸರಾಸರಿ 17 ಡಿಗ್ರಿಯಷ್ಟಿಯರಲಿದೆ. ಅಂದರೆ ಕಳೆದ ವಾರಕ್ಕೆ ಹೋಲಿಸಲಿದರೆ ಈ ವಾರ ಮತ್ತಷ್ಟು ಚಳಿ ಹೆಚ್ಚಾಗಲಿದೆ. ಸಂಕ್ರಾಂತಿಯವರೆಗೂ ಈ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.
ವಿಶೇಷವಾಗಿ ಚಿಕ್ಕಮಗಳೂರು, ಕೊಡಗು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 13-14 ಡಿಗ್ರಿಗೆ ಇಳಿಕೆಯಾಗಲಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರಲಿದೆ. ಉಳಿದಂತೆ ಕೋಲಾರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲೂ ಕನಿಷ್ಠ ತಾಪಮಾನ 16-17 ಡಿಗ್ರಿಯಷ್ಟು ಕಂಡುಬರಲಿದೆ.