Select Your Language

Notifications

webdunia
webdunia
webdunia
webdunia

Karnataka Weather: ವಿಪರೀತ ಚಳಿಯ ನಡುವೆ ಈ ವಾರದ ಹವಾಮಾನ ಗುಡ್ ನ್ಯೂಸ್ ನೀಡಲಿದೆ

Karnataka Weather

Krishnaveni K

ಬೆಂಗಳೂರು , ಸೋಮವಾರ, 29 ಡಿಸೆಂಬರ್ 2025 (08:42 IST)
ಬೆಂಗಳೂರು: ರಾಜ್ಯದ ಕಳೆದ ಎರಡು ವಾರಗಳಿಂದ ವಿಪರೀತ ಚಳಿಯ ವಾತಾವರಣವಿತ್ತು. ಆದರೆ ವಿಪರೀತ ಚಳಿಯಿಂದ ನಡುಗುತ್ತಿದ್ದರೆ ಈ ವಾರದ ಹವಾಮಾನ ಗುಡ್ ನ್ಯೂಸ್ ನೀಡಲಿದೆ.

ಕಳೆದ ವಾರವಿಡೀ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿತ್ತು. ಜನ ವಿಪರೀತ ಚಳಿಯಿಂದ ನಡುಗಿ ಹೋಗಿದ್ದರು. ಆದರೆ ಈ ವಾರ ಹವಾಮಾನದಲ್ಲಿ ಕೊಂಚ ಬದಲಾವಣೆ ನಿರೀಕ್ಷಿಸಬಹುದಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೊಂಚ ಚಳಿ ಕಡಿಮೆಯಾಗಲಿದೆ.

ಈ ವಾರ ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 17-19 ಡಿಗ್ರಿಯವರೆಗೆ ಏರಿಕೆಯಾಗಲಿದೆ. ಹೀಗಾಗಿ ಕಳೆದ ವಾರಕ್ಕೆ ಹೋಲಿಸಿದರೆ ಕೊಂಚ ಚಳಿ ಕಡಿಮೆಯೆನಿಸಬಹುದು. ಗರಿಷ್ಠ ತಾಪಮಾನವೂ ಈ ವಾರ 28 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.

ಚಿಕ್ಕಮಗಳೂರು, ಕೊಡಗು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಕಳೆದ ವಾರ ಕನಿಷ್ಠ ತಾಪಮಾನ 12-13 ಡಿಗ್ರಿಯ ಆಸುಪಾಸಿನಲ್ಲಿತ್ತು. ಆದರೆ ಈ ವಾರ ಕೊಂಚ ಏರಿಕೆಯಾಗಲಿದ್ದು 16 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ. ಕೆಲವು ಜಿಲ್ಲೆಗಳಲ್ಲಿ ವಾರಂತ್ಯದಲ್ಲಿ ತುಂತುರು ಮಳೆಯಾಗುವ ಸೂಚನೆಯೂ ಇದೆ. ಹೀಗಾಗಿ ಈ ವಾರ ಹವಾಮಾನದಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ರಾಜಕೀಯ ತೆವಲಿಗೆ ಕನ್ನಡಿಗರ ಸ್ವಾಭಿಮಾನ ಅಡವಿಡಬೇಡಿ: ಸಿಟಿ ರವಿ