Select Your Language

Notifications

webdunia
webdunia
webdunia
webdunia

Karnataka Weather: ಇನ್ನೂ ಮೂರು ದಿನ ಶೀತಗಾಳಿಯ ಎಚ್ಚರಿಕೆ

Bengaluru Rains

Krishnaveni K

ಬೆಂಗಳೂರು , ಸೋಮವಾರ, 22 ಡಿಸೆಂಬರ್ 2025 (08:40 IST)
ಬೆಂಗಳೂರು: ರಾಜ್ಯದಲ್ಲಿ ಈಗ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ ಕಂಡುಬರುತ್ತಿದೆ. ಇನ್ನೂ ಮೂರು ದಿನ ಶೀತ ಗಾಳಿಯ ಎಚ್ಚರಿಕೆ ನೀಡಲಾಗಿದೆ.

ವಿಶೇಷವಾಗಿ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಶೀತ ಗಾಳಿಯ ಎಚ್ಚರಿಕೆಯಿದೆ. ಈ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದಲೂ ವಿಪರೀತ ಚಳಿಯಿದೆ. ಶೀತ ಗಾಳಿಯ ಸಾಧ್ಯತೆ ಪರಿಣಾಮ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ಈ ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗಲು ಬಿಸಿಲು, ರಾತ್ರಿ ವಿಪರೀತ ಚಳಿ ಕಂಡುಬರುವುದು. ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲೂ ಕನಿಷ್ಠ ತಾಪಮಾನ 12-14 ಡಿಗ್ರಿಯೊಳಗಿರಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ವಾರದಂತೇ ವಿಪರೀತ ಚಳಿ ಈ ವಾರವೂ ಮುಂದುವರಿಯಲಿದೆ. ವಾರವಿಡೀ 15-16 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ. ಕೋಲಾರ, ತುಮಕೂರು, ಹುಬ್ಬಳ್ಳಿ, ಧಾರವಾಡ, ಗದಗ ಮೊದಲಾದ ಜಿಲ್ಲೆಗಳಲ್ಲೂ ವಿಪರೀತ ಚಳಿ ಕಂಡುಬರಲಿದೆ. ರಾಜ್ಯದ ಈ ವಾರದ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಲ್ಲಿಸಿದ್ದ ಪೊಲೀಸ್ ವಾಹನದಿಂದ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆದ ಆರೋಪಿ, ಖಾಕಿ ಶಾಕ್