ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆ ಈಗ ಚಳಿಗೆ ಗಡ ಗಡ ನಡುಗುತ್ತಿದೆ. ಈ ವಾರಂತ್ಯದಲ್ಲಿ ಮತ್ತಷ್ಟು ಚಳಿ ನಿರೀಕ್ಷಿಸಲಾಗಿದೆ. ವಾರಂತ್ಯದ ಹವಾಮಾನ ವರದಿ ಇಲ್ಲಿದೆ ನೋಡಿ.
ಈ ವಾರವಿಡೀ ರಾಜ್ಯದಲ್ಲಿ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ಕಂಡುಬಂದಿತ್ತು. ಅದರಲ್ಲೂ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ದಾಖಲೆಯ ಕನಿಷ್ಠ ತಾಪಮಾನ ಕಂಡುಬಂದಿತ್ತು. ವಾರಂತ್ಯದಲ್ಲೂ ವಿಪರೀತ ಚಳಿ ನಿರೀಕ್ಷಿಸಲಾಗಿದೆ.
ಅದರಲ್ಲೂ ಇಂದು ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 15 ಡಿಗ್ರಿಗೆ ಇಳಿಕೆಯಾಗಲಿದೆ. ಹೀಗಾಗಿ ಇಂದು ಭಾರೀ ಚಳಿ ನಿರೀಕ್ಷಿಸಲಾಗಿದೆ. ನಾಳೆ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿರಲಿದೆ.
ಬೀದರ್, ಚಿಕ್ಕಮಗಳೂರು, ಕೊಡಗು, ಹಾಸನ, ಕೋಲಾರ, ತುಮಕೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಂತೂ 12-14 ಡಿಗ್ರಿಯೊಳಗೆ ಕನಿಷ್ಠ ತಾಪಮಾನವಿರಲಿದೆ. ಬೆಂಗಳೂರಿನಲ್ಲೂ 15 ಡಿಗ್ರಿಯಷ್ಟು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.