ಬೆಂಗಳೂರು: ಕರ್ನಾಟಕದಲ್ಲಿ ಈಗ ವಿಪರೀತ ಚಳಿಯ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಈ ಕೆಲವು ಜಿಲ್ಲೆಗಳಿಗೆ ಶೀತ ಅಲೆಯ ಎಚ್ಚರಿಕೆ ನೀಡಲಾಗಿದ್ದು ವಿಪರೀತ ಚಳಿಯಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಮೋಡ ಕವಿದ ವಾತಾವರಣವಿರುತ್ತದೆ. ಅಪರೂಪಕ್ಕೆ ಬಿಸಿಲು ಕಂಡುಬರುತ್ತಿದೆ. ಬೆಳಿಗ್ಗೆ ದಟ್ಟ ಮಂಜು ಮುಸುಕಿದ ವಾತಾವರಣವಿರುತ್ತದೆ. ಇಂದೂ ಅದೇ ಹವಾಮಾನ ಮುಂದುವರಿಯಲಿದೆ. ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ದಾಖಲಾಗುವವ ಸಾಧ್ಯತೆಯಿದೆ.
ಇನ್ನು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ. ವಿಶೇಷವಾಗಿ ಬೀದರ್, ಕಲಬುರಗಿ, ವಿಜಯಪುರ ವಿಪರೀತ ಚಳಿಯಿರಲಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ಜನರಿಗೆ ಸಂಜೆ ಮತ್ತು ಬೆಳಗ್ಗಿನ ಜಾವ ಮನೆಯಿಂದ ಹೊರಗೆ ಬಾರದೇ ಇರುವುದು ಉತ್ತಮ ಎಂದು ಸೂಚಿಸಲಾಗಿದೆ.
ಇನ್ನು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ, ತುಮಕೂರು ಮೊದಲಾದ ಜಿಲ್ಲೆಗಳಲ್ಲೂ ವಿಪರೀತ ಚಳಿ ಕಂಡುಬರುವುದು. ಇಂದು ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿರಲಿದೆ. ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.