ಬೆಂಗಳೂರು: ರಾಜ್ಯದಲ್ಲಿ ಈಗ ಎಲ್ಲೆಡೆ ಚಳಿಯ ವಾತಾವರಣವಿದ್ದು, ಇಂದು ತಾಪಮಾನದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತಿವೆ.
ಕಳೆದ ವಾರ ವಾಯುಭಾರ ಕುಸಿತದಿಂದ ತಾಪಮಾನ ಕೊಂಚ ಏರಿಕೆಯಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯೂ ಆಗಿತ್ತು. ಆದರೆ ಈ ವಾರ ಆರಂಭದಿಂದಲೇ ಮತ್ತೆ ತಾಪಮಾನದಲ್ಲಿ ಇಳಿಕೆಯಾಗುತ್ತಲೇ ಇದೆ. ಇಂದು ಮತ್ತಷ್ಟು ಕುಸಿತವಾಗಲಿದೆ.
ಇಂದು ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಗೆ ಕುಸಿಯಲಿದೆ. ಇಂದು ಗರಿಷ್ಠ ತಾಪಮಾನ 26 ಡಿಗ್ರಿಯಷ್ಟು ನಿರೀಕ್ಷಿಸಲಾಗಿದೆ. ಆದರೆ ವಾರದ ಅಂತ್ಯಕ್ಕೆ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ತಾಪಮಾನದಲ್ಲಿ ಕೊಂಚ ಏರಿಕೆ ಕಂಡುಬರುವುದು.
ವಿಶೇಷವಾಗಿ ಇಂದು ಕೊಡಗು, ಚಿಕ್ಕಮಗಳೂರು, ಹಾಸನ, ಬೀದರ್, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 13-14 ಡಿಗ್ರಿಯಷ್ಟಿರಲಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ 15-16 ಡಿಗ್ರಿಯಷ್ಟು ಕಂಡುಬರುವುದು.