ಬೆಂಗಳೂರು: ರಾಜ್ಯದಲ್ಲಿ ವಾರಂತ್ಯಕ್ಕೆ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡುಬರಲಿದೆ. ಇಂದು ವಿಪರೀತ ಚಳಿ ಜೊತೆಗೆ ಈ ಜಿಲ್ಲೆಗೆ ಮೋಡ ಕವಿದ ವಾತಾವರಣವಿರಲಿದೆ.
ರಾಜ್ಯದಲ್ಲಿ ಇಂದು ನಿನ್ನೆಗೆ ಹೋಲಿಸಿದರೆ ಕನಿಷ್ಠ ತಾಪಮಾನ ಕೊಂಚ ಏರಿಕೆಯಾಗಲಿದೆ. ಹಾಗಿದ್ದರೂ ವಿಪರೀತ ಚಳಿ ಮುಂದುವರಿಯಲಿದೆ. ಇಂದು ಸರಾಸರಿ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ. ಗರಿಷ್ಠ ತಾಪಮಾನ 24 ಡಿಗ್ರಿಯಷ್ಟಿರಲಿದೆ.
ಕೋಲಾರ, ಬೆಳಗಾವಿ ಜಿಲ್ಲೆಯಲ್ಲಿ ಇಂದು ಬಹುತೇಕ ಮೋಡ ಕವಿದ ವಾತಾವರಣವಿರಲಿದೆ. ಉಳಿದಂತೆ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಚಿಕ್ಕಮಗಳೂರು, ಕೊಡಗು, ಬೀದರ್ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ತಾಪಮಾನ 13 ಡಿಗ್ರಿಯಷ್ಟಿರಲಿದೆ.
ಚಿಕ್ಕಬಳ್ಳಾಪುರ, ತುಮಕೂರು, ಹುಬ್ಬಳ್ಳಿ, ಧಾರವಾಡ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 14-15 ಡಿಗ್ರಿಯಷ್ಟಿರಲಿದೆ. ಉಳಿದ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 15-17 ಡಿಗ್ರಿಯಷ್ಟಿರಲಿದೆ.