Daily Horoscope

Select Your Language

Notifications

webdunia
webdunia
webdunia
webdunia

ರೊಮ್ಯಾನ್ಸ್ ಮಾಡೋದನ್ನು ಕಲಿಯಲು ಪಾರ್ಕ್ ಗೆ ಹೋಗ್ತಿದ್ರಂತೆ ರಾಕಿಂಗ್ ಸ್ಟಾರ್ ಯಶ್

Yash
ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ರೊಮ್ಯಾನ್ಸ್ ಮಾಡೋದನ್ನು ಕಲಿಯುವುದಕ್ಕೆಂದೇ ಹೆಲ್ಮೆಟ್ ಹಾಕಿಕೊಂಡು ಪಾರ್ಕ್ ಗೆ ಹೋಗಿ ಕುಳಿತುಕೊಳ್ಳುತ್ತಿದ್ದರಂತೆ.

ಹೀಗಂತ ಅವರೇ ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ನಲ್ಲಿ ಬೆಡಗಿಯ ಜೊತೆ ಕಾರಿನಲ್ಲಿ ಸರಸದ ದೃಶ್ಯವೊಂದು ಫುಲ್ ವೈರಲ್ ಆಗಿದೆ. ಆದರೆ ಈ ಹಿಂದೆ ಅವರು ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸಲು ಎಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

ಯಶ್ ಆಗಿನ್ನೂ ಸಿನಿಮಾಗೆ ಎಂಟ್ರಿ ಕೊಟ್ಟಿರಲಿಲ್ಲ. ಖ್ಯಾತ ನಿರ್ದೇಶಕ ವಿನು ಬಳಂಜ ನಿರ್ದೇಶನದ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆಗಲೇ ಅವರು ತಮ್ಮ ಪಾತ್ರದ ಮೂಲಕ  ತಕ್ಕಮಟ್ಟಿಗೆ ಜನಪ್ರಿಯರಾಗಿದ್ದರು.

ಆದರೆ ಏನೇ ಮಾಡಿದರೂ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಅವರು ನಟಿಸುತ್ತಿದ್ದ ರೀತಿ ನಿರ್ದೇಶಕರಿಗೆ ತೃಪ್ತಿಯೇ ಆಗುತ್ತಿರಲಿಲ್ಲವಂತೆ. ಏನೇ ಆದರೂ ನಿನಗೆ ರೊಮ್ಯಾನ್ಸ್ ಮಾಡಲು ಬರಲ್ಲ ಎಂದು ವಿನು ಬಳಂಜ ಹೇಳಿದ್ದರಂತೆ.

ಇದೇ ಕಾರಣಕ್ಕೆ ಯಶ್ ಹೇಗಾದ್ರೂ ಕಲಿಯಬೇಕಲ್ಲ ಎಂದು ಹೆಲ್ಮೆಟ್ ಹಾಕಿಕೊಂಡು ಪಾರ್ಕ್ ಗಳಿಗೆ ಹೋಗಿ ಅಲ್ಲಿ ಪ್ರೇಮಿಗಳ ಹಾವ ಭಾವ ಹೇಗಿರುತ್ತದೆ ಎಂದು ನೋಡಲು ಹೋಗುತ್ತಿದ್ದರಂತೆ. ಮನೆಗೆ ಬಂದು ಅಮ್ಮನ ಜೊತೆ ರೊಮ್ಯಾಂಟಿಕ್ ದೃಶ್ಯದ ರಿಹರ್ಸಲ್ ಮಾಡುತ್ತಿದ್ದರಂತೆ. ಯಶ್ ಏನಾದ್ರೂ ಅಮ್ಮನಿಗೆ ನೋಡು ಈಗ ನಾನು ರೊಮ್ಯಾಂಟಿಕ್ ಸನ್ನಿವೇಶ ಮಾಡ್ತೀನಿ, ನೀನೇ ಹೀರೋಯಿನ್ ಎಂದರೆ ‘ಥೂ ಹೋಗೋ’ ಎಂದು ಬೈದು ಕಳುಹಿಸುತ್ತಿದ್ದರಂತೆ. ಇದನ್ನು ಅವರು ವೀಕೆಂಡ್ ವಿತ್ ರಮೇಶ್ ನಲ್ಲಿ ಹೇಳಿಕೊಂಡಿದ್ದರು. ಅದೇ ಯಶ್ ಬಳಿಕ ತೆರೆಮೇಲೆ ರೊಮ್ಯಾಂಟಿಕ್ ಸನ್ನಿವೇಶವನ್ನು ನೀರು ಕುಡಿದಂತೆ ಮಾಡುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೀಡಾಪಟುಗಳನ್ನು ಮುಟ್ಟಲು ಹಿಂಜರಿದ ಹೇಮಾ ಮಾಲಿನಿ, ನಟಿಯ ನಡವಳಿಕೆಗೆ ಭಾರೀ ಟೀಕೆ, ವಿಡಿಯೋ