Publish Date: Fri, 13 Feb 2026 (14:06 IST)
Updated Date: Fri, 13 Feb 2026 (14:11 IST)
ಮಕ್ಕಳಿಗೆ ಚಾಕಲೇಟ್ ಎಂದರೆ ಇಷ್ಟವೇ. ಆದರೆ ಚಾಕಲೇಟ್ ಸಿಹಿ ತಿಂದ ತಕ್ಷಣ ನೀರು ಕುಡಿಯಬೇಕೆನಿಸುತ್ತದೆ. ಚಾಕಲೇಟ್ ತಿಂದ ಬಳಿಕ ನೀರು ಕುಡಿಯಬಹುದೇ ಇಲ್ಲಿದೆ ವಿವರ.
ಮಕ್ಕಳು ಚಾಕಲೇಟ್ ತಿಂದ ಕೂಡಲೇ ನೀರು ಕುಡಿಯುವುದು ಉತ್ತಮ ಅಭ್ಯಾಸ. ಕೆಲವರಿಗೆ ಚಾಕಲೇಟ್ ತಿಂದ ಬಳಿಕ ಹೊಟ್ಟೆ ನೋವು ಬರುವ ಸಾಧ್ಯತೆಯಿರುತ್ತದೆ. ಚಾಕಲೇಟ್ ತಿಂದ ಬಳಿಕ ನೀರು ಕುಡಿದರೆ ಹೊಟ್ಟೆ ನೋವಿನ ಸಮಸ್ಯೆ ಬರಲ್ಲ. ಚಾಕಲೇಟ್ ಅಂಟು ಅಂಟಾಗಿರುತ್ತದೆ ಮತ್ತು ಸಕ್ಕರೆ ಅಂಶ ಅಧಿಕವಾಗಿರುತ್ತದೆ. ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಉತ್ತಮ.
ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಚಾಕಲೇಟ್ ನಲ್ಲಿರುವ ಸಿಹಿ ಅಂಶ ಹೀರಿಕೊಂಡು ಆಸಿಡ್ ಬಿಡುಗಡೆಗೊಳಿಸುತ್ತದೆ. ಇದನ್ನು ತಪ್ಪಿಸಲು ತಕ್ಷಣವೇ ನೀರು ಸೇವನೆ ಮಾಡಬೇಕು. ಅಲ್ಲದೆ ಚಾಕಲೇಟ್ ನಲ್ಲಿರುವ ಸಿಹಿ ಅಂಶ ಹಲ್ಲಿಗೆ ಅಂಟಿಕೊಂಡು ಹಲ್ಲು ಹಾನಿಯಾಗುವುದೂ ತಪ್ಪುತ್ತದೆ.
ಸಿಹಿ ಅಂಶ ತಿಂದ ಬಳಿಕ ನೀರು ಸೇವನೆ ಮಾಡಬೇಕೆನಿಸುತ್ತದೆ. ಯಾಕೆಂದರೆ ಅತಿಯಾದ ಸಿಹಿ ತಿಂದಾಗ ದೇಹ ಸಮತೋಲನ ಬಯಸುತ್ತದೆ. ಹೀಗಾಗಿ ನೀರು ಕುಡಿದರೆ ಸಕ್ಕರೆ ಅಂಶ ಸಮತೋಲನಕ್ಕೆ ಬರುತ್ತದೆ. ಹೀಗಾಗಿ ಚಾಕಲೇಟ್ ತಿಂದ ತಕ್ಷಣ ಮಕ್ಕಳಿಗೆ ಯಾವುದೇ ಸಂಶಯವಿಲ್ಲದೇ ನೀರು ಸೇವನೆ ಮಾಡಲು ಕೊಡಿ.