Select Your Language

Notifications

webdunia
webdunia
webdunia
webdunia

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

Periods
ಕೆಲವರಿಗೆ ತಿಂಗಳಿಗೆ ಸರಿಯಾಗಿ ಮುಟ್ಟು ಬರಲ್ಲ. ಮುಟ್ಟು ತಡವಾಗುವುದಕ್ಕೆ ಕಾರಣಗಳು ಅನೇಕ. ಅವುಗಳು ಯಾವುವೆಲ್ಲಾ ಇಲ್ಲಿದೆ ನೋಡಿ ವಿವರ.

ಮೂಡ್ ಬದಲಾವಣೆ: ಕೆಲವೊಮ್ಮೆ ಅತಿಯಾದ ದುಃಖ, ಖುಷಿ, ಒತ್ತಡ, ಆತಂಕ, ಭಯ ಮೊದಲಾದ ಮೂಡ್ ಬದಲಾವಣೆಗಳು ಮುಟ್ಟಿನ ಮೇಲೆ ಪರಿಣಾಮ ಬೀರಬಹುದು.
ಆಹಾರ ಬದಲಾವಣೆ: ಅತಿಯಾದ ಕೆಫೈನ್ ಅಂಶದ ಆಹಾರ ಸೇವನೆ, ಅತಿಯಾದ ಖಾರದ ಆಹಾರ ಸೇವನೆ, ಹೈ ಪ್ರೊಟೀನ್ ಆಹಾರಗಳು ಮುಟ್ಟು ತಡವಾಗುವುದಕ್ಕೆ ಕಾರಣಗಳಾಗಬಹುದು.
ಹಾರ್ಮೋನ್ ಬದಲಾವಣೆ: ವಯಸ್ಸು 30 ದಾಟಿದ ಮೇಲೆ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಥೈರಾಯ್ಡ್ ಹೆಚ್ಚಳ, ಈಸ್ಟ್ರೋಜನ್ ಮತ್ತು ಪ್ರೊಜೆಸ್ಟಿರೋನ್ ಹಾರ್ಮೋನ್ ಸರಿಯಾಗಿ ಬಿಡುಗಡೆ ಆಗದೇ ಇರುವುದು ಕಾರಣವಾಗಬಹುದು. ಅಲ್ಲದೆ, ಕೆಲವರಲ್ಲಿ ಮುಟ್ಟು ನಿಲ್ಲುವ ಸಂದರ್ಭದಲ್ಲಿ ಆಗುವ ಹಾರ್ಮೋನ್ ಬದಲಾವಣೆಗಳಿಂದಲೂ ಈ ರೀತಿ ಆಗುತ್ತದೆ.
ಆರೋಗ್ಯ ಸಮಸ್ಯೆಗಳು: ಮಧುಮೇಹ, ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಯಾವುದಾದರೂ ಸೋಂಕು ರೋಗಗಳಿಂದ ಬಳಲುತ್ತಿದ್ದರೂ ಮುಟ್ಟು ತಡವಾಗುವ ಸಾಧ್ಯತೆಗಳಿರುತ್ತವೆ.

ಮುಟ್ಟು ತಡವಾಗಿ ಅಸಹಜ ರಕ್ತಸ್ರಾವ, ವಿಪರೀತ ಬೆವರು, ಎದೆನೋವು, ತೂಕ ಇಳಿಕೆ ಅಥವಾ ಹೆಚ್ಚಳವಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಖೆಯಾಗುತ್ತಿದೆ ಎಂದರೆ ಬಿಸಿಲು ಮಾತ್ರ ಕಾರಣವಲ್ಲ: ಎಚ್ಚರಿಕೆ