Publish Date: Tue, 03 Feb 2026 (19:48 IST)
Updated Date: Tue, 03 Feb 2026 (19:50 IST)
ಬೆಂಗಳೂರು: ಹಾಲು ಸೇವನೆ ಮಾಡಿದರೆ ಕೆಲವರಿಗೆ ಅಲರ್ಜಿಯಾಗುತ್ತದೆ. ಯಾರಿಗೆಲ್ಲಾ ಹಾಲಿನ ಸೇವನೆಯಿಂದ ಅಲರ್ಜಿಯಾಗುತ್ತದೆ ಮತ್ತು ಇದಕ್ಕೆ ಕಾರಣವೇನು ಇಲ್ಲಿದೆ ವಿವರ.
ಹಾಲು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಹಾಲು ಒಂದು ಪರಿಪೂರ್ಣ ಆಹಾರವಾಗಿದ್ದು ಶಕ್ತಿ ವರ್ಧಕ. ಆದರೆ ಕೆಲವರಿಗೆ ಹಾಲು ಸೇವನೆ ಮಾಡುವುದರಿಂದ ಚರ್ಮದ ಅಲರ್ಜಿ, ಹೊಟ್ಟೆಯ ಕಿರಿ ಕಿರಿ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗುತ್ತದೆ.
ವಿಶೇಷವಾಗಿ ನವಜಾತ ಮಕ್ಕಳಿಗೆ ಹಾಲು ಅಲರ್ಜಿಯಾಗಬಹುದು. ಇಲ್ಲವೇ ಕುಟುಂಬದಲ್ಲಿ ಈ ರೀತಿ ಹಿನ್ನಲೆಯಿದ್ದವರಿಗೆ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಹಾಲು ಅಲರ್ಜಿಕಾರಕವಾಗಬಹುದು. ಇದಕ್ಕೆ ಕಾರಣವೂ ಇದೆ.
ಹಾಲು ಸೇವನೆ ಮಾಡಿದಾಗ ನಿಮ್ಮ ದೇಹ IgE ಎಂಬ ಆಂಟಿ ಬಾಡಿ ಬಿಡುಗಡೆ ಮಾಡುತ್ತದೆ. ಇದು ಹಿಸ್ಟಾಮೈನ್ ಎನ್ನುವ ಕೆಮಿಕಲ್ ರಿಲೀಸ್ ಮಾಡುವಂತೆ ಪ್ರಚೋದಿಸುತ್ತದೆ. ಇದರ ಪರಿಣಾಮವೇ ಕೆಲವರಿಗೆ ಹೊಟ್ಟೆಯಲ್ಲಿ ಕಿರಿ ಕಿರಿ, ಉಸಿರಾಟದ ಸಮಸ್ಯೆ ಅಥವಾ ಚರ್ಮದಲ್ಲಿ ತುರಿಕೆ, ಊದಿಕೊಳ್ಳುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.