Select Your Language

Notifications

webdunia
webdunia
webdunia
webdunia

ಈ ಔಷಧಿಗಳನ್ನು ಎಕ್ಸಪೈರಿ ಡೇಟ್ ಆದ ಮೇಲೆ ತಗೊಂಡ್ರೆ ಜೀವಕ್ಕೇ ಕುತ್ತು video

Medicine
ಕೆಲವು ಔಷದಿಗಳನ್ನು ಎಕ್ಸ್ ಪೈರಿ ಡೇಟ್ ಕಳೆದ ಮೇಲೆ ತೆಗೆದುಕೊಂಡರೆ ಅದರಿಂದ ಜೀವಕ್ಕೇ ಕುತ್ತಾಗಬಹುದು. ಅಂತಹ ಔಷಧಿಗಳು ಯಾವುವು ನೋಡಿ.

ನಾವು ಮೆಡಿಕಲ್ ಗಳಲ್ಲಿ ಔಷಧಿ ತೆಗೆದುಕೊಳ್ಳುವಾಗ ಎಕ್ಸ್ ಪೈರಿ ಡೇಟ್ ನೋಡಿಕೊಂಡೇ ತೆಗೆದುಕೊಳ್ಳಬೇಕು. ಸುದೀರ್ಘ ಕಾಲ ಬಳಕೆ ಮಾಡುವ ಔಷಧಿಗಳಾದರೆ ಹೆಚ್ಚು ಸಮಯ ಎಕ್ಸ್ ಪೈರಿ ಡೇಟ್ ಇರುವ ಔಷಧಿ ತೆಗೆದುಕೊಳ್ಳುವುದು ಉತ್ತಮ.

ಒಂದು ವೇಳೆ ಎಕ್ಸ್ ಪೈರಿ ಡೇಟ್ ಆದ ತಲೆನೋವು ಮುಂತಾದ ಸಾಮಾನ್ಯ ಸಮಸ್ಯೆಗಳ ಗುಳಿಗೆ ತೆಗೆದುಕೊಂಡಲ್ಲಿ ಹೆಚ್ಚಿನ ವ್ಯತ್ಯಾಸವಾಗದು. ಆದರೆ ಕೆಲವೊಂದು ಮಾರಕ ಖಾಯಿಲೆಗಳ ಔಷಧಿಗಳನ್ನು ಎಕ್ಸ್ ಪೈರಿ ಡೇಟ್ ಆದ ಬಳಿಕ ಸೇವಿಸಿದರೆ ಅದು ಗಂಭಿರ ಪರಿಣಾಮ ಬೀರಬಹುದು.

ವಿಶೇಷವಾಗಿ ಸಿರಪ್ ಗಳನ್ನು ನಿಗದಿತ ದಿನಾಂಕ ಮುಗಿದ ಬಳಿಕ ಸೇವಿಸಬಾರದು. ಇದರಿಂದ ಆ ಸಿರಪ್ ನಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಾಗಿರುತ್ತದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅದೇ ರೀತಿ ಕಣ್ಣು, ಮೂಗು, ಕಿವಿಗೆ ಬಿಡುವ ಡ್ರಾಪ್ ಗಳೂ ಡೇಂಜರ್. ಅದೇ ರೀತಿ ಇನ್ಸುಲಿನ್ ಔಷಧಿಗಳು, ಹೃದಯ ಸಂಬಂಧೀ ಖಾಯಿಲೆಯ ಔಷಧಿಗಳನ್ನೂ ಎಕ್ಸ್ ಪೈರಿ ಡೇಟ್ ಕಳೆದ ಬಳಿಕ ಸೇವಿಸಬೇಡಿ. ಇದು ಕೆಲವೊಮ್ಮೆ ಮಾರಣಾಂತಿಕವೂ ಆಗುವ ಅಪಾಯವಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ