ಯಾವುದೇ ಕಾಲವಿರಲಿ ಹಣ್ಣುಗಳನ್ನು ಸೇವನೆ ಮಾಡುವುದು ಒಳ್ಳೆಯದೇ. ಆದರೆ ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವ ಮೊದಲು ಈ ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳಿ.
ಚಳಿಗಾಲದಲ್ಲಿ ವಾತಾವರಣ ಬದಲಾವಣೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಂದು ಹಣ್ಣುಗಳು ಬೇಗನೇ ಶೀತದ ಸಮಸ್ಯೆ ತಂದೊಡುತ್ತವೆ. ಕೆಲವು ಹಣ್ಣುಗಳು ಜೀರ್ಣವಾಗದೇ ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಹಣ್ಣುಗಳ ಸೇವನೆಯಿಂದ ಆರೋಗ್ಯ ಹಾಳಾಗಬಾರದೆಂದರೆ ಈ ಕೆಲವು ವಿಚಾರಗಳು ನೆನಪಿರಲಿ.
-ಫ್ರಿಡ್ಜ್ ನಲ್ಲಿ ಹಣ್ಣು ಇಟ್ಟುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಸೇವಿಸುವ ಕೆಲವು ಸಮಯ ಮೊದಲೇ ಹೊರಗಿಟ್ಟು ಕೊಠಡಿಯ ಉಷ್ಣತೆಗೆ ತನ್ನಿ.
-ಜೀರ್ಣ ಸಮಸ್ಯೆಯಾಗುತ್ತಿದ್ದರೆ ಆಪಲ್ ನಂತಹ ಹಣ್ಣನ್ನ ಸ್ವಲ್ಪ ಬಿಸಿ ನೀರಿನಲ್ಲಿ ಹಾಕಿ ನಂತರ ಸೇವನೆ ಮಾಡಿ. ಇದರಿಂದ ಜೀರ್ಣ ಸುಲಭವಾಗಿ ಆಗುತ್ತದೆ.
-ಚಳಿಗಾಲದಲ್ಲಿ ವಿಟಮಿನ್ ಸಿ ಅಂಶ ದೇಹಕ್ಕೆ ಅಗತ್ಯ. ಈ ಸಮಯದಲ್ಲಿ ಸಿಗುವ ಹಣ್ಣುಗಳನ್ನೇ ಆದಷ್ಟು ಸೇವನೆ ಮಾಡಿ.
-ಚಳಿಗಾಲದಲ್ಲಿ ರಾತ್ರಿ ವೇಳೆ ಹಣ್ಣು ಸೇವಿಸುವುದು ಉತ್ತಮವಲ್ಲ. ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ ಸೇವನೆ ಮಾಡಿ.
-ಶೀತ ಪ್ರಕೃತಿಯ ಹಣ್ಣು ಸೇವಿಸುವಾಗ ಸ್ವಲ್ಪ ಉಪ್ಪು, ಖಾರ, ಪೆಪ್ಪರ್ ಪೌಡರ್ ಸೇರಿಸಿ ಸೇವನೆ ಮಾಡಿ.