Publish Date: Tue, 20 Jan 2026 (12:02 IST)
Updated Date: Tue, 20 Jan 2026 (12:04 IST)
ಮುಟ್ಟಿನ ದಿನಗಳಲ್ಲಿ ಬರುವ ದೈಹಿಕ ಸಮಸ್ಯೆಗಳ ನಿವಾರಣೆಗೆ ಹಲವು ಸಲಹೆಗಳನ್ನು ನೀಡಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ನೀರು ಎಷ್ಟು ಕುಡಿಯಬೇಕು ಮತ್ತು ನೀರು ಸೇವನೆ ಎಷ್ಟು ಮುಖ್ಯ ಇಲ್ಲಿದೆ ನೋಡಿ ಟಿಪ್ಸ್.
ಮುಟ್ಟಿನ ದಿನಗಳಲ್ಲಿ ಹೆಚ್ಚು ನೀರ ಕುಡಿಯುವುದರಿಂದ ಹೊಟ್ಟೆನೋವು, ಮಾಂಸಖಂಡಗಳಲ್ಲಿ ಸೆಳೆತ ಸೇರಿದಂತೆ ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ನೀರು ಸೇವನೆ ಮಾಡಬೇಕು.
ಮುಟ್ಟಿನ ದಿನಗಳಲ್ಲಿ ನಿರ್ಜಲೀಕರಣದಿಂದ ಮಾಂಸಖಂಡಗಳು ಬಿಗಿಯಾಗುವಿಕೆ, ನೋವು ಕಾಣಿಸಿಕೊಳ್ಳಬಹುದು. ಹೀಗಾಗಿ ನೀರು ಹೆಚ್ಚು ಸೇವಿಸಬೇಕು. ಇನ್ನು ಮುಟ್ಟಿನ ದಿನಗಳಲ್ಲಿ ಸುಸ್ತಾಗುವುದು, ತಲೆನೋವು ಬರುವ ಲಕ್ಷಣಗಳು ಕೆಲವರಲ್ಲಿ ಕಂಡುಬರುತ್ತದೆ. ಇದಕ್ಕೂ ಈ ಸಂದರ್ಭದಲ್ಲಿ ದೇಹ ನಿರ್ಜಲೀಕರಣಕ್ಕೊಳಗಾಗುವುದು ಕಾರಣವಾಗುತ್ತದೆ.
ಅಷ್ಟೇ ಅಲ್ಲ ಮುಟ್ಟಿನ ಸಮಯದಲ್ಲಿ ದೇಹದಿಂದ ಋತುಸ್ರಾವದ ಮೂಲಕ ನೀರಿನಂಶ ಹೆಚ್ಚು ಹೊರಹೋಗುತ್ತದೆ. ಈ ಸಂದರ್ಭದಲ್ಲಿ ನೀರು ಹೆಚ್ಚು ಸೇವನೆ ಮಾಡುವುದು ಅಗತ್ಯವಾಗಿದೆ. ನೀರು ಹೆಚ್ಚು ಸೇವನೆ ಮಾಡುವುದರಿಂದ ರಕ್ತದೊತ್ತಡ ಸಹಜವಾಗಿರುತ್ತದೆ ಮತ್ತು ಮೆದುಳು ಮತ್ತು ಮಾಂಸಖಂಡಗಳಿಗೆ ಆಮ್ಲಜನಕ ಪೂರೈಕೆ ಉತ್ತಮವಾಗಿರುತ್ತದೆ.
ಎಷ್ಟು ನೀರು ಸೇವಿಸಬೇಕು?
ಮುಟ್ಟಿನ ಸಮಯದಲ್ಲಿ ಮಹಿಳೆಯರು ದಿನಕ್ಕೆ 2 ರಿಂದ 2.5 ಲೀಟರ್ ಅದಂತೆ 8-10 ಕಪ್ ನೀರು ಸೇವನೆ ಮಾಡಬೇಕು. ನೆನಪಿರಲಿ, ನೀರಿನ ಬದಲು ಕಾಫಿ ಸೇವನೆ ಮಾಡಿದರೆ ಪ್ರಯೋಜನವಾಗುವುದು. ಕೆಫೈನ್ ಅಂಶವಿರುವ ಪಾನೀಯ ಸೇವನೆ ನೋವು ಹೆಚ್ಚಿಸಬಹುದು.