Publish Date: Mon, 19 Jan 2026 (19:22 IST)
Updated Date: Mon, 19 Jan 2026 (19:27 IST)
ಬಿಪಿ ಅಥವಾ ರಕ್ತದೊತ್ತಡವನ್ನು ಸಮತೋಲದಲ್ಲಿದಡಲು ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇನ್ನು ಸಾಮಾನ್ಯವಾಗಿ ನಮ್ಮ ಬಿಪಿಯಲ್ಲಿ ಹತೋಟಿಗೆ ತರಲು ಇಲ್ಲಿದೆ ಕೆಲ ಸಲಹೆಗಳು.
ಆಹಾರ ಕ್ರಮದಲ್ಲಿ ಉಪ್ಪಿನ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ದಿನಕ್ಕೆ ಒಂದು ಟೀಚಮಚಕ್ಕಿಂತ ಹೆಚ್ಚು ಉಪ್ಪು ಬಳಸಬೇಡಿ. ಉಪ್ಪಿನಕಾಯಿ, ಹಪ್ಪಳ ಮತ್ತು ಸಂಸ್ಕರಿಸಿದ ಆಹಾರಗಳನ್ನು ದೂರವಿಡಿ.
ಪೊಟ್ಯಾಸಿಯಮ್ ಹೆಚ್ಚಿರುವ ಆಹಾರಗಳಾದ ಬಾಳೆಹಣ್ಣು, ಎಳನೀರು, ಪಾಲಕ್ ಸೊಪ್ಪು ಮತ್ತು ಗೆಡ್ಡೆಗೆಣಸುಗಳನ್ನು ಸೇವಿಸಿ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಧಾನ್ಯಗಳು ಮತ್ತು ತರಕಾರಿ: ನಾರಿನಂಶವಿರುವ ಆಹಾರಗಳು, ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ.
ದೈಹಿಕ ಚಟುವಟಿಕೆಯನ್ನು ಮಾಡಿ: ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಈಜು ಅಥವಾ ಸೈಕ್ಲಿಂಗ್ ಮಾಡಿ.
ತೂಕ ಇಳಿಕೆ: ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಬಿಪಿ ನಿಯಂತ್ರಣಕ್ಕೆ ತುಂಬಾ ಸಹಕಾರಿ.