ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಿದ ಬಳಿಕ ಬಾಯಿ ವಾಸನೆ ಬರುವುದು ಸಹಜ. ಇದರಿಂದ ಇನ್ನೊಬ್ಬರ ಮುಂದೆ ಬಾಯಿ ತೆರೆಯಲೂ ಸಂಕೋಚವಾಗುತ್ತದೆ. ಬಾಯಿ ವಾಸನೆ ಹೋಗಲಾಡಿಸಲು ಇಲ್ಲಿದೆ ಬೆಸ್ಟ್ ಉಪಾಯಗಳು.
ಈರುಳ್ಳಿ ಅಥವಾ ಬೆಳ್ಳುಳ್ಳಿ ಪ್ರಬಲ ವಾಸನೆಯುಕ್ತ ಅಹಾರ ಪದಾರ್ಥಗಳು. ಇವುಗಳನ್ನು ಸೇವಿಸಿದರೆ ಬ್ರಷ್ ಮಾಡಿದರೂ ಕೆಲವೊಮ್ಮೆ ಬಾಯಿ ವಾಸನೆ ಹೋಗಲ್ಲ. ಇದರಿಂದಾಗಿ ಇನ್ನೊಬ್ಬರ ಜೊತೆ ಮಾತನಾಡುವಾಗ ಬಾಯಿಗೆ ಕೈ ಅಡ್ಡ ಇಟ್ಟುಕೊಳ್ಳುವ ಪರಿಸ್ಥಿತಿಯಾಗುತ್ತದೆ. ಇದರಿಂದ ಮುಕ್ತಿ ಬೇಕೆಂದರೆ ಈ ಸಿಂಪಲ್ ಟ್ರಿಕ್ಸ್ ಮಾಡಿ ನೋಡಿ.
ಗ್ರೀನ್ ಆಪಲ್ ಸೇವನೆ ಮಾಡಿ: ಆಪಲ್ ನಲ್ಲಿ ಬಾಯಿ ವಾಸನೆ ಹೋಗಲಾಡಿಸುವ ಗುಣ ಹೊಂದಿದ್ದು ಇದನ್ನು ಸೇವನೆ ಮಾಡುವುದರಿಂದ ಬಾಯಿ ವಾಸನೆ ತೊಡೆದುಹೋಗುತ್ತದೆ.
ಪುದೀನಾ ಸೊಪ್ಪು ಜಗಿಯಿರಿ: ಈರುಳ್ಳಿ ತಿಂದ ತಕ್ಷಣ ಸ್ವಲ್ಪ ಪುದೀನಾ ಎಲೆಗಳನ್ನು ಬಾಯಿಗೆ ಹಾಕಿ ಜಗಿಯಿರಿ.
ಬಸಳೆ ಅಥವಾ ಪಾಲಕ್ ಸೊಪ್ಪು: ಎರಡು ಎಲೆ ಬಸಳೆ ಅಥವಾ ಪಾಲಕ್ ಸೊಪ್ಪು ಬಾಯಿಗೆ ಹಾಕಿಕೊಂಡು ಐದು ನಿಮಿಷ ಚೆನ್ನಾಗಿ ಜಗಿಯಿರಿ. ಇದರಿಂದ ಬಾಯಿ ವಾಸನೆ ಹೋಗುತ್ತದೆ.
ಮಜ್ಜಿಗೆ: ದಪ್ಪ ಮಜ್ಜಿಗೆಯನ್ನು ಬಾಯಿಗೆ ಹಾಕಿ ಐದು ನಿಮಿಷ ಇಟ್ಟುಕೊಳ್ಳಿ.