Publish Date: Tue, 13 Jan 2026 (16:56 IST)
Updated Date: Tue, 13 Jan 2026 (17:05 IST)
ಚಳಿಗಾಲದ ಸಮಯದಲ್ಲಿ ವಾರಕ್ಕೆ ಒಂದು ಬಾರಿ ಹುರುಳಿ ಕಾಳನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಇನ್ನೂ ಹುರುಳಿ ಕಾಳನ್ನು "ಸೂಪರ್ ಫುಡ್" ಎಂದೇ ಪರಿಗಣಿಸಲಾಗುತ್ತದೆ. ವಿಶೇಷವಾಗಿ ಇದನ್ನು ಮೊಳಕೆ ಬರಿಸಿ ತಿನ್ನುವುದರಿಂದ ಅದರ ಶಕ್ತಿ ಮತ್ತು ಪೋಷಕಾಂಶಗಳು ಇನ್ನಷ್ಟು ಹೆಚ್ಚಾಗುತ್ತದೆ.
ಹುರುಳಿ ಕಾಳು ಮೊಳಕೆ ಬರಿಸಿ ತಿನ್ನುವುದರಿಂದ ಆಗುವ ಪ್ರಯೋಜನ ಇಲ್ಲಿದೆ:
ನಮ್ಮ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ತುಂಬಾ ಸಹಕಾರಿಯಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ ಹೆಚ್ಚಾಗಿ ಇರುವುದರಿಂದ ಇದು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಮೆಟಬಾಲಿಸಂ ಹೆಚ್ಚಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ಮೂತ್ರಪಿಂಡದ ಕಲ್ಲು ನಿವಾರಣೆ:
ಮೂತ್ರಪಿಂಡದಲ್ಲಿ ಕಲ್ಲು ಇರುವವರಿಗೆ ಹುರುಳಿ ಕಾಳು ಅತ್ಯುತ್ತಮ ಮದ್ದು. ಮೊಳಕೆ ಭರಿಸಿದ ಹುರುಳಿ ಕಾಳಿನ ನೀರು ಅಥವಾ ಸಾರು ಸೇವಿಸುವುದರಿಂದ ಕಲ್ಲುಗಳು ಕರಗಲು ಮತ್ತು ಮೂತ್ರ ವಿಸರ್ಜನೆ ಸುಗಮವಾಗಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣ
ಮೊಳಕೆ ಭರಿಸಿದ ಹುರುಳಿ ಕಾಳು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿಡಲು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶೀತ ಮತ್ತು ಕೆಮ್ಮಿಗೆ ಪರಿಹಾರ:
ಆಯುರ್ವೇದದ ಪ್ರಕಾರ ಹುರುಳಿ ಕಾಳು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಜ್ವರ, ಶೀತ, ಕೆಮ್ಮು ಅಥವಾ ಕಫದ ಸಮಸ್ಯೆ ಇರುವಾಗ ಮೊಳಕೆ ಕಾಳಿನ ಕಟ್ಟು ಅಥವಾ ಸಾರು ಸೇವಿಸಿದರೆ ತಕ್ಷಣದ ಆರಾಮ ಸಿಗುತ್ತದೆ.
ಕಬ್ಬಿಣದ ಅಂಶ ಸಮೃದ್ಧ:
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕರಿಸುತ್ತದೆ.