Select Your Language

Notifications

webdunia
webdunia
webdunia
webdunia

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

Banana with peppar

Krishnaveni K

ಬೆಂಗಳೂರು , ಶುಕ್ರವಾರ, 16 ಜನವರಿ 2026 (13:34 IST)
Photo Credit: Instagram
ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸಿನ ಪೌಡರ್ ಮಾಡಿ ಸೇವನೆ ಮಾಡಿ. ಇದರಿಂದ ಆಗುವ ಲಾಭ ತಿಳಿದರೆ ಖಂಡಿತಾ ನೀವು ಈ ಅಭ್ಯಾಸವನ್ನು ಬಿಡಲ್ಲ.

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಂಶ, ವಿಟಮಿನ್ ಬಿ6, ಮ್ಯಾಗ್ನಿಶಿಯಂ ಹೇರಳವಾಗಿದೆ. ಇದು ಶಕ್ತಿವರ್ಧಕ ಕೂಡಾ. ಕಾಳುಮೆಣಸಿನಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗಿದೆ. ಬಾಳೆಹಣ್ಣಿನ ಜೊತೆಗೆ ಕಾಳುಮೆಣಸಿನ ಪೌಡರ್ ಹಾಕಿ ಸೇವನೆ ಮಾಡುವುದಕ್ಕೆ ಆಯುರ್ವೇದಲ್ಲಿ ಮಹತ್ವವಿದೆ.

ಬಾಳೆಹಣ್ಣಿನ ಜೊತೆಗೆ ಪೆಪ್ಪರ್ ಪೌಡರ್ ಹಾಕಿ ಸೇವಿಸುವುದರಿಂದ ಯಕೃತ್ ವಿಷಮುಕ್ತಗೊಳಿಸಲು ಸಹಕರಿಸುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಹೀಗಾಗಿ ಹೊಟ್ಟೆ ಉಬ್ಬರ, ಹೊಟ್ಟೆಯಲ್ಲಿ ಆಗುವ ಕಿರಿ ಕಿರಿಗಳನ್ನು ದೂರ ಮಾಡುತ್ತದೆ.

ಕೆಲವರಿಗೆ ಬಾಳೆಹಣ್ಣು ಸೇವನೆ ಮಾಡುವುದರಿಂದ ಶೀತವಾಗುವ ಸಮಸ್ಯೆಯಿರುತ್ತದೆ. ಅಂತಹವರು ಸ್ವಲ್ಪ ಕಾಳುಮೆಣಸು ಸೇರಿಸಿ ಸೇವನೆ ಮಾಡಿದರೆ ಶೀತವಾಗುವುದು ತಪ್ಪುತ್ತದೆ. ಆದರೆ ನೆನಪಿರಲಿ, ಯಾವುದೇ ಔಷಧಿ ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ