ಮಹಿಳೆಯರು ಬೋರಲು ಮಲಗಬಾರದೇ? ಹೀಗೊಂದು ಗೊಂದಲ ಅನೇಕರಲ್ಲಿರುತ್ತದೆ. ಆದರೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್ ಹಿಂದೊಮ್ಮೆ ಖಾಸಗಿ ವಾಹಿನಿಯ ಆರೋಗ್ಯ ಸಂವಾದ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಅತ್ಯುತ್ತಮ ಸಲಹೆ ನೀಡಿದ್ದಾರೆ.
ಹೊಟ್ಟೆ, ಎದೆಯ ಭಾಗ ಕೆಳಭಾಗದಲ್ಲಿರುವಂತೆ ಬೋರಲು ಮಲಗುವುದರಿಂದ ಮಹಿಳೆಯರಲ್ಲಿ ಸ್ತನಗಳಲ್ಲಿ ಗಡ್ಡೆ ಅಥವಾ ಅಂಡಾಶಯದ ಸಿಸ್ಟ್ ಸಮಸ್ಯೆಗಳು ಬರಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವೇ ಎನ್ನುವುದಕ್ಕೆ ಅವರು ಈ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದರು.
ಅಂಡಾಶಯದ ಸಿಸ್ಟ್ ಎನ್ನುವುದು ನಾನಾ ಕಾರಣಗಳಿಗೆ ಬರಬಹುದು. ಅಂಡಾಶಯದ ಸಿಸ್ಟ್ ಎನ್ನುವುದು ದೊಡ್ಡದಾಗಿದ್ದರೆ ಅದು ಬೇರೆ ಬೇರೆ ಕಾರಣಗಳಿಗೆ ಬರಬಹುದು. ಅದು ಬೋರಲು ಮಲಗುವುದರಿಂದಲೇ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಬೇರೆ ಕಾರಣಗಳಿಗೂ ಸಿಸ್ಟ್ ಆಗಬಹುದು ಎಂದು ಹೇಳಿದ್ದರು.