Select Your Language

Notifications

webdunia
webdunia
webdunia
webdunia

ಸಕ್ಕರೆ ಖಾಯಿಲೆ ದೂರ ಮಾಡಲು ಈ ಮೂರು ಅಭ್ಯಾಸ ಸಾಕು ಎನ್ನುತ್ತಾರೆ ಡಾ ಸಿಎನ್ ಮಂಜುನಾಥ್

Dr CN Manjunath

Krishnaveni K

ಬೆಂಗಳೂರು , ಸೋಮವಾರ, 11 ಆಗಸ್ಟ್ 2025 (10:10 IST)
ಸಕ್ಕರೆ ಖಾಯಿಲೆ ತಡೆಯಲು ಏನು ಮಾಡಬೇಕು ಎಂದು ಎಲ್ಲರಿಗೂ ಪ್ರಶ್ನೆಯಿದೆ. ಇದಕ್ಕೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಲಹೆ ನೀಡಿದ್ದಾರೆ. ಅವರು ಮೂರು ಅಭ್ಯಾಸಗಳಿದ್ದರೆ ಔಷಧವಿಲ್ಲದೇ ಸಕ್ಕರೆ ಖಾಯಿಲೆ ದೂರ ಮಾಡಬಹುದು ಎಂದಿದ್ದಾರೆ. ಅವುಗಳು ಯಾವುವು ನೋಡಿ.

ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ, ಸಕ್ಕರೆ ಖಾಯಿಲೆ ಇರುವವರ ಸಂಖ್ಯೆ 7 ಕೋಟಿಗೂ ಅಧಿಕ. ಸಕ್ಕರೆ ಖಾಯಿಲೆಯ ಗಡಿಯಲ್ಲಿರುವವರ ಸಂಖ್ಯೆಯೂ ಇಷ್ಟೇ ಇದೆ. ಹೀಗಾಗಿ ಸಕ್ಕರೆ ಖಾಯಿಲೆ ಬರದಂತೆ ನಾವು ತಡೆಯಬೇಕಾಗಿರುವುದು ತುಂಬಾ ಮುಖ್ಯ.

ನಾವು ಸಾಮಾನ್ಯವಾಗಿ ಔಷಧಿ ಎಂದರೆ ವೈದ್ಯರ ಬಳಿ ಹೋಗಿ ಬಾಟಲಿಯಲ್ಲಿ ಸಿಗುವುದೇ ಔಷಧಿ ಎಂದುಕೊಳ್ಳುತ್ತೇವೆ. ಯಾವುದಾದರೂ ಖಾಯಿಲೆ ಬಂದಾಗ ವೈದ್ಯರು ಔಷಧಿ ಕೊಡುತ್ತಾರೆ. ಆದರೆ ಅದು ನಿಜವಾದ ಔಷಧಿಯಲ್ಲ. ಖಾಯಿಲೆ ಬರದಂತೆ ನಾವು ನೋಡಿಕೊಳ್ಳುವುದು ಮತ್ತು ಅಂತಹ ಜೀವನ ಶೈಲಿ ರೂಢಿಸಿಕೊಳ್ಳುವುದೇ ನಿಜವಾದ ಔಷಧಿ.

ವಿಶೇಷವಾಗಿ ಸಕ್ಕರೆ ಖಾಯಿಲೆ ಬರದಂತೆ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯ. ಸಕ್ಕರೆ ಖಾಯಿಲೆ ಬರದಂತೆ ತಡೆಯಬೇಕೆಂದರೆ ಮುಖ್ಯವಾಗಿ ಮೂರು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮೊದಲನೆಯದಾಗಿ ವಾಕಿಂಗ್. ಪ್ರತಿನಿತ್ಯ ನಿಯಮಿತವಾಗಿ ಒಂದಷ್ಟು ಹೊತ್ತು ವಾಕಿಂಗ್ ಮಾಡುವುದು ಸಕ್ಕರೆ ಖಾಯಿಲೆಯನ್ನು ದೂರ ಮಾಡುತ್ತದೆ. ಎರಡನೆಯದ್ದು ಸುಖವಾದ ನಿದ್ರೆ. ಆರೋಗ್ಯಕರವಾದ ನಿದ್ರೆ ಯಾವುದೇ ಖಾಯಿಲೆಯನ್ನು ದೂರ ಮಾಡಬಹುದು. ಮೂರನೆಯದ್ದು ಉಪವಾಸ. ಅಪರೂಪಕ್ಕೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಊಟ ಬಿಡುವುದು ಆರೋಗ್ಯಕ್ಕೆ ಉತ್ತಮ. ಈ ಮೂರು ಅಭ್ಯಾಸಗಳಿಂದ ಸಕ್ಕರೆ ಖಾಯಿಲೆ ದೂರಮಾಡಬಹುದು ಎನ್ನುತ್ತಾರೆ ಡಾ ಸಿನ್ ಮಂಜುನಾಥ್.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಬಾಸ್ ಎಂದು ಹೇಳುವವರಿಗೆ ನಮ್ ಕಂಡ್ರೆ ಹೊಟ್ಟೆ ಉರಿ: ಅಮೆರಿಕಾಗೆ ರಾಜನಾಥ್ ಸಿಂಗ್ ಟಾಂಗ್