ಅನೇಕರಿಗೆ ಮದ್ಯಪಾನ ಚಟವಾಗಿಬಿಟ್ಟಿರುತ್ತದೆ. ಆದರೆ ಒಂದು ವಾರಕ್ಕೆ ಎಷ್ಟು ಬಾರಿ ಅಥವಾ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತವಾಗಿರುತ್ತದೆ ನೋಡಿ.
ಮದ್ಯಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಿದ್ದರೂ ಒಮ್ಮೆ ಚಟ ಹತ್ತಿಕೊಂಡರೆ ಅದನ್ನು ಬಿಡಲು ಕಷ್ಟ. ಆಧುನಿಕ ಜಗತ್ತಿಗೆ ಅನಿವಾರ್ಯವಾಗಿಯೋ, ಪಾರ್ಟಿ ನೆಪದಲ್ಲೋ ಮದ್ಯ ಸೇವನೆ ಮಾಡುವುದು ಫ್ಯಾಶನ್ ಆಗಿಬಿಟ್ಟಿದೆ.
ಆದರೆ ಅತಿಯಾದ ಮದ್ಯ ಸೇವನೆ ಖಂಡಿತಾ ಉತ್ತಮವಲ್ಲ. ತಜ್ಞರ ಪ್ರಕಾರ ಪುರುಷರು ಒಂದು ವಾರಕ್ಕೆ 15 ಸ್ಟ್ಯಾಂಡರ್ಡ್ ಡ್ರಿಂಕ್ಸ್ ಗಿಂತ ಕಡಿಮೆ ಕುಡಿಯಬೇಕು ಮತ್ತು ಒಂದು ದಿನಕ್ಕೆ 4 ಸ್ಟ್ಯಾಂಡರ್ಡ್ ಡ್ರಿಂಕ್ಸ್ ಗಿಂತ ಹೆಚ್ಚು ಕುಡಿಯಬಾರದು.
ಮಹಿಳೆಯರು ವಾರಕ್ಕೆ 10 ಸ್ಟ್ಯಾಂಡರ್ಡ್ ಗಿಂತ ಕಡಿಮೆ ಕುಡಿಯಬೇಕು. ಒಂದು ವೇಳೆ ಪುರುಷರು ವಾರಕ್ಕೆ 8 ಡ್ರಿಂಕ್ಸ್ ಗಿಂತ ಹೆಚ್ಚು ಸೇವನೆ ಮಾಡಿದರೆ ಮತ್ತು ಪುರುಷರು 15 ಕ್ಕಿಂತ ಹೆಚ್ಚು ಡ್ರಿಂಕ್ಸ್ ಮಾಡುವುದು ಅಪಾಯಕಾರಿ ಎನ್ನಲಾಗುತ್ತದೆ.