Daily Horoscope

Select Your Language

Notifications

webdunia
webdunia
webdunia
webdunia

ಮೊದಲ ಮಗಳು ಗೌರಿ ಜೊತೆ ಸಂಬಂಧ ಹೇಗಿದೆ ಎಂದು ಬಿಚ್ಚಿಟ್ಟ ನಿರ್ದೇಶಕ ಎಸ್ ಮಹೇಂದರ್ Video

S Mahendar-Gowri Shruthi
ಬೆಂಗಳೂರು: ಮೊದಲ ಮಗಳು ಗೌರಿ ಜೊತೆ ತಮ್ಮ ಸಂಬಂಧ ಹೇಗಿದೆ ಎಂಬುದನ್ನು ನಿರ್ದೇಶಕ ಎಸ್ ಮಹೇಂದರ್ ಯೂಟ್ಯೂಬ್ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಬಿಯೋಂಡ್ ಲಿಮಿಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಜೊತೆಗಿನ ಸಂದರ್ಶನದಲ್ಲಿ ಎಸ್ ಮಹೇಂದರ್ ತಮ್ಮ ಮೊದಲ ಮಗಳು ಮತ್ತು ಈಗಿನ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಮನದಾಳದ ಮಾತನಾಡಿದ್ದಾರೆ.

‘ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಅವಳು ಬೇಕೆಂದಾಗಲೆಲ್ಲಾ ಇಲ್ಲಿಗೆ ಬಂದು ಹೋಗುತ್ತಿರುತ್ತಾಳೆ. ಅವಳು ತುಂಬಾ ಸಂಸ್ಕಾರವಂತ ಮಗು. ನನ್ನ ಮನೆಯಾಕೆ ಯಶೋಧೆಗೂ ಅವಳೆಂದರೆ ತುಂಬಾ ಇಷ್ಟ. ನನ್ನ ಮಗನಿಗೆ ಹೇಳುತ್ತಿರುತ್ತಾಳೆ ಅಕ್ಕನ ಥರಾ ಇರು ಅಂತ. ನನ್ನ ಮಗನ ಹುಟ್ಟುಹಬ್ಬ ಇರಲಿ ಮನೆಯಲ್ಲಿ ಏನೇ ವಿಶೇಷ ಇದ್ದರೂ ಬಂದೇ ಬರುತ್ತಾಳೆ. ಮತ್ತೆ ಕೆಲವೊಮ್ಮೆ ಹಳ್ಳಿಗೆ ನಡಿ ಎಂದು ನಮ್ಮ ಹಳ್ಳಿಗೆ ಕರೆದುಕೊಂಡು ಹೋಗಲು ಹೇಳುತ್ತಾಳೆ. ಅಲ್ಲಿ ನಮ್ಮ ಹಳೆಯ ಮನೆಯಿದೆ. ಅಲ್ಲಿ ಸೊಪ್ಪು, ತರಕಾರಿ ಎಂದು ಅಡುಗೆ ಮಾಡಿಕೊಂಡು ಖುಷಿಯಾಗಿರುತ್ತಾಳೆ. ನಮ್ಮ ಮನೆಗೆ ಬಂದರೂ ಅಷ್ಟೇ ನನ್ನ ಹೆಂಡತಿ ಜೊತೆ ಅಡುಗೆ ಮಾಡಿಕೊಂಡು ಚೆನ್ನಾಗಿರುತ್ತಾಳೆ. ನಾನು ತುಂಬಾ ಸಾಫ್ಟ್. ಹೀಗಾಗಿ ನನ್ನ ಮಗನನ್ನೂ ಹಾಗೇ ಬೆಳೆಸಬೇಡ ಎಂದು ಹೇಳುತ್ತಿರುತ್ತಾಳೆ. ಯಶೋಧಳೇ ಹೇಳುತ್ತಿರುತ್ತಾಳೆ ಯಾಕೆ ನೀವಿಬ್ಬರೂ ಇಂಡಸ್ಟ್ರಿಯಲ್ಲಿದ್ದೀರಿ. ನಮ್ಮ ಮಿಲಿ ಎಷ್ಟು ಚೆನ್ನಾಗಿದ್ದಾಳೆ ಅವಳ ಕೈಯಲ್ಲಿ ಒಂದು ಪಾತ್ರ ಮಾಡಿಸಬಹುದಲ್ವಾ ಎಂದು ಅವಳದ್ದು ಒಂದು ಒಳ್ಳೆಯ ಗುಣವೆಂದರೆ ತಾಯಿ ಮನೆಯ ವಿಷಯ ತಂದು ಇಲ್ಲಿ ಹೇಳಲ್ಲ, ಇಲ್ಲಿನ ವಿಷಯ ತೆಗೆದುಕೊಂಡು ಅಲ್ಲಿ ಹೇಳಲ್ಲ. ನಾನು ಪುಣ್ಯ ಮಾಡಿದ್ದೆ ಇಂಥಾ ಹೆಂಡತಿ ಮತ್ತು ಮಗಳ ವಿಚಾರದಲ್ಲಿ’ ಎಂದು ಮಹೇಂದರ್ ಮನದಾಳ ಹಂಚಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಬಾಸ್, ಡಿಬಾಸ್ ಎಂದು ಕೂಗಿದ ಫ್ಯಾನ್ಸ್‌ಗೆ ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದ ರವಿಚಂದ್ರನ್