Publish Date: Tue, 17 Feb 2026 (13:41 IST)
Updated Date: Tue, 17 Feb 2026 (13:47 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಬರುವವರಿಗೆ ಕೆಲವು ಷರತ್ತುಗಳು ಅನ್ವಯವಾಗಲಿದೆ. ವಿಜಯ್, ರಶ್ಮಿಕಾ ಮದುವೆ ಫೋಟೋಗಳು ಎಲ್ಲೂ ಲೀಕ್ ಆಗದಂತೆ ನೋಡಿಕೊಳ್ಳಲಾಗುತ್ತದೆ.
ಇತ್ತೀಚೆಗೆ ಸೆಲೆಬ್ರಿಟಿಗಳು ತಮ್ಮ ಮದುವೆಯ ಫೋಟೋಗಳನ್ನು ಲೀಕ್ ಆಗದಂತೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕೂಡಾ ತಮ್ಮ ಮದುವೆ ಫೋಟೋಗಳು ಸಿಕ್ಕ ಸಿಕ್ಕಲ್ಲಿ ಲೀಕ್ ಆಗಿ ಟ್ರೋಲಿಗರಿಗೆ ಆಹಾರವಾಗದಂತೆ ಖಾಸಗಿಯಾಗಿಡಲು ಕಠಿಣ ಕ್ರಮ ಕೈಗೊಂಡಿದ್ದಾರೆ.
ಫೆಬ್ರವರಿ 26 ರಂದು ವಿಜಯ್ ಮತ್ತು ರಶ್ಮಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆಯಲ್ಲಿ ಕೇವಲ ಇಬ್ಬರ ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದಾರೆ. ಅವರಿಗೂ ಕಠಿಣ ನಿಯಮವಿದೆ. ಮದುವೆಗೆ ಬರುವವರು ಯಾವುದೇ ಕಾರಣಕ್ಕೂ ಮೊಬೈಲ್, ಕ್ಯಾಮರಾ ಬಳಸುವಂತಿಲ್ಲ. ಮೊಬೈಲ್ ಬಳಕೆಯಾಗದಂತೆ ಕಣ್ಗಾವಲು ಇಡಲಾಗುತ್ತದೆ.
ಮದುವೆಗೆ ಫೋಟೋಗ್ರಫಿಗೆಂದೇ ಏಜೆನ್ಸಿಯೊಂದಕ್ಕೆ ಕೆಲಸ ಒಪ್ಪಿಸಲಾಗಿದೆ. ಅವರೇ ಎಲ್ಲವನ್ನೂ ನೋಡಿಕೊಳ್ಳಲಿದ್ದಾರೆ. ಅವರೂ ಎಲ್ಲೂ ಫೋಟೋಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಮದುವೆ ಫೋಟೋಗಳನ್ನು ಸ್ವತಃ ವಿಜಯ್ ಮತ್ತು ರಶ್ಮಿಕಾ ಹಂಚಿಕೊಳ್ಳುವವರೆಗೆ ಯಾವುದೂ ಹೊರಗೆ ಬಾರದಂತೆ ನೋಡಿಕೊಳ್ಳಲಾಗುತ್ತದೆ.