Publish Date: Thu, 19 Feb 2026 (09:11 IST)
Updated Date: Thu, 19 Feb 2026 (09:16 IST)
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೂಪರ್ 8 ಕ್ಕೆ ಈಗಾಗಲೇ ಲಗ್ಗೆಯಿಟ್ಟಿದೆ. ಸೂಪರ್ 8 ಹಂತದ ಟೀಂ ಇಂಡಿಯಾ ಪಂದ್ಯಗಳ ವೇಳಾಪಟ್ಟಿ, ಯಾವ ತಂಡಗಳು ಎದುರಾಳಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಾಲ್ಕು ಗುಂಪುಗಳ ಅಗ್ರ ಎರಡು ತಂಡಗಳು ಸೂಪರ್ 8 ಕ್ಕೆ ಅರ್ಹತೆ ಪಡೆಯುತ್ತದೆ. ಅದರಂತೆ ಎ ಗುಂಪಿನ ಅಗ್ರಸ್ಥಾನಿ ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಕ್ಕೆ ಅರ್ಹತೆ ಪಡೆದಿತ್ತು. ಇದೀಗ ಸೂಪರ್ 8 ಹಂತದಲ್ಲಿ ಎಲ್ಲಾ ತಂಡಗಳು ಮೂರು ಪಂದ್ಯಗಳನ್ನು ಆಡಬೇಕಾಗುತ್ತದೆ. ಟೀಂ ಇಂಡಿಯಾಗೆ ಮೊದಲ ಪಂದ್ಯ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ದಿನಾಂಕ ಎದುರಾಳಿ ಸ್ಥಳ
ಫೆ.22 ದ.ಆಫ್ರಿಕಾ ಅಹ್ಮದಾಬಾದ್
ಫೆ.26 ಜಿಂಬಾಬ್ವೆ ಚೆನ್ನೈ
ಮಾ.1 ವೆಸ್ಟ್ ಇಂಡೀಸ್ ಕೋಲ್ಕತ್ತಾ
ಸೂಪರ್ 8 ಹಂತದ ಎಲ್ಲಾ ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.