Select Your Language

Notifications

webdunia
webdunia
webdunia
webdunia

T20 WC: ಸೋಲೇ ಕಾಣದ ಟೀಂ ಇಂಡಿಯಾಗೆ ಇಂದು ಗೆಲುವೇ ಕಾಣದ ನೆದರ್ಲ್ಯಾಂಡ್ಸ್ ಎದುರಾಳಿ

Team India in T20 WC
Photo Credit: X
ಅಹ್ಮದಾಬಾದ್: ಟಿ20 ವಿಶ್ವಕಪ್ 2026 ರ ಇಂದಿನ ಪಂದ್ಯದಲ್ಲಿ ಸೋಲೇ ಕಾಣದ ಟೀಂ ಇಂಡಿಯಾಗೆ ಗೆಲುವೇ ಕಾಣದ ನೆದರ್ಲ್ಯಾಂಡ್ಸ್ ಎದುರಾಳಿಯಾಗಿರಲಿದೆ.

ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದ ಟೀಂ ಇಂಡಿಯಾ 3 ಪಂದ್ಯಗಳಿಂದ 3 ಗೆಲುವು ಕಂಡಿದ್ದು ಈಗಾಗಲೇ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ 8 ಕ್ಕೆ ಕಾಲಿಟ್ಟಿದೆ. ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ತನ್ನ ಅಬ್ಬರ ತೋರಿಸಿದೆ.

ಆದರೆ ಬ್ಯಾಟಿಂಗ್ ನಲ್ಲಿ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಅವಲಂಬಿಸಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಝಲಕ್ ತೋರಿಸಿದ್ದಾರೆ. ಆದರೆ ಭಾರತಕ್ಕೆ ದೊಡ್ಡ ತಲೆನೋವು ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಫಾರ್ಮ್.

ಸೂಪರ್ 8 ರ ಹಂತಕ್ಕೆ ಮೊದಲು ಈ ಇಬ್ಬರೂ ಫಾರ್ಮ್ ಗೆ ಬಂದರೆ ಭಾರತದ ಬ್ಯಾಟಿಂಗ್ ಬಲ ಹೆಚ್ಚಲಿದೆ. ಈ ಪಂದ್ಯದಲ್ಲಿ ಭಾರತ ಬೌಲಿಂಗ್ ನಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಯಿದೆ. ಕುಲದೀಪ್ ಯಾದವ್ ಸ್ಥಾನದಲ್ಲಿ ಅರ್ಷ್ ದೀಪ್ ಸಿಂಗ್ ಆಡುವ ಸಾಧ್ಯತೆಯಿದೆ. ಉಳಿದಂತೆ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ. ಇಂದಿನ ಈ ಪಂದ್ಯ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿದ್ದು ಸಂಜೆ 7 ಗಂಟೆಗೆ ಆರಂಭವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ 8 ವಿಕೆಟ್ ಕಿತ್ತ ಮೊಹಮ್ಮದ್ ಶಮಿ: ಬೆಂಕಿ ಬೌಲಿಂಗ್ ವಿಡಿಯೋ ನೋಡಿ